ಎಸೆಸೆಲ್ಸಿ: ಮಂಗಳೂರು ತಾಲೂಕಿಗೆ 89.19 ಶೇ. ಫಲಿತಾಂಶ

Update: 2016-05-17 13:24 GMT

ಮಂಗಳೂರು, ಮೇ 17: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಂಗಳೂರು ತಾಲೂಕಿನಲ್ಲಿ 13,546 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 12,082 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.89.19 ಫಲಿತಾಂಶ ಲಭಿಸಿದೆ. ತಾಲೂಕಿನಲ್ಲಿ ಒಟ್ಟು 34 ಶಾಲೆಗಳು 100 ಶೇ. ಫಲಿತಾಂಶ ದಾಖಲಿಸಿದೆ.

ತಾಲೂಕಿನ ಉತ್ತರ ವಲಯ 88.72 ಶೇ. ಫಲಿತಾಂಶ ಗಳಿಸಿದೆ. 3,065 ಗಂಡು ಮಕ್ಕಳು, 2,894 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಇವರಲ್ಲಿ 2,597 ವಿದ್ಯಾರ್ಥಿಗಳು, 2690 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಇಲ್ಲಿ 15 ಶಿಕ್ಷಣ ಸಂಸ್ಥೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಸರಕಾರಿ ಪ್ರೌಢಶಾಲೆಗಳ ಪೈಕಿ ಕಾರ್‌ಸ್ಟ್ರೀಟ್‌ನ ಬಾಲಕಿಯರ ಸರಕಾರಿ ಪ.ಪೂ. ಕಾಲೇಜು, ನಡುಗೋಡು ಸರಕಾರಿ ಪ್ರೌಢಶಾಲೆ, ಚಿತ್ರಾಪುರ ಸರಕಾರಿ ಪ್ರೌಢಶಾಲೆ, ಮುಲ್ಕಿ ಮೊರಾರ್ಜಿ ಮಾದರಿ ವಸತಿ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.

ಅನುದಾನಿತ ಪ್ರೌಢಶಾಲೆಗಳಲ್ಲಿ ಸೀಮಂತೂರು ಶಾರದ ಪ್ರೌಢಶಾಲೆ, ಪೇಜಾವರ ಪ್ರೌಢಶಾಲೆ, ಕಳವಾರ, ಬಜ್ಪೆ, 100 ಶೇ. ಫಲಿತಾಂಶ ಪಡೆದುಕೊಂಡಿದೆ. ಅನುದಾನರಹಿತ ಪ್ರೌಢಶಾಲೆಗಳಲ್ಲಿ ಸುರತ್ಕಲ್‌ಮಹಾಲಿಂಗೇಶ್ವರ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಅಂಜುಮನ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಸುರತ್ಕಲ್ ವಿದ್ಯಾದಾಯಿನಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಕಿಲ್ಪಾಡಿ ವ್ಯಾಸ ಮಹರ್ಷಿ ವಿದ್ಯಾಪೀಠ, ಸುರತ್ಕಲ್‌ಹೋಲಿ ಫ್ಯಾಮಿಲಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಹ್ಯಾಟ್‌ಹಿಲ್‌ಬ್ಯಾರೀಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಬಜ್ಪೆ ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಮುಕ್ಕ ಹೋಲಿ ಸ್ಪಿರಿಟ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ , ಚೈತನ್ಯ ಪಬ್ಲಿಕ್ ಹೈಸ್ಕೂಲ್ 100 ಶೇ. ಫಲಿತಾಂಶ ದಾಖಲಿಸಿದೆ.

ಮಂಗಳೂರು ತಾಲೂಕಿನ ದಕ್ಷಿಣ ವಲಯ 88.90 ಶೇ. ಫಲಿತಾಂಶ ದಾಖಲಿಸಿದೆ. ಇಲ್ಲಿ 2,586 ಗಂಡು ಮಕ್ಕಳು, 3,163 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಈ ಪೈಕಿ 2,171 ಗಂಡು ಮಕ್ಕಳು 2,942 ಹೆಣ್ಣು ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಈ ವಲಯ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆಗಳಲ್ಲಿ ಹಂಪನಕಟ್ಟೆಯ ಅಭ್ಯಾಸಿ ಫ್ರೌಢಶಾಲೆ, ನಾಟೆಕಲ್ ಮುಸ್ಲಿಮ್ ವಸತಿ ಶಾಲೆ, ಕಲ್ಲಾಡಿ ಸರಕಾರಿ ಪ್ರೌಢಶಾಲೆ, ಅತ್ತಾವರ ಸರಕಾರಿ ಪ್ರೌಢಶಾಲೆ, ದೇರಳಕಟ್ಟೆ ಹಿಂದುಳಿದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕುತಿನಪದವು ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100 ಫಲಿತಾಂಶ ಗಳಿಸಿದೆ.

ಅನುದಾನಿತ ಪ್ರೌಢಶಾಲೆಯಲ್ಲಿ ಫಳ್ನೀರ್‌ನ ಸೈಂಟ್ ಮೇರಿಸ್ ಹೆಣ್ಮಕ್ಕಳ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ. ಅನುದಾನರಹಿತ ಪ್ರೌಢಶಾಲೆಗಳ ಪೈಕಿ ಕುಲಶೇಖರ ಸೈಂಟ್ ಜೋಸೆಫ್ ಪ್ರೌಢಶಾಲೆ, ಕಲ್ಲಾಪು ಸೈಯದ್ ಮದನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸೋಮೇಶ್ವರ ಕಾರ್ಮೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 100 ಶೇ. ಫಲಿತಾಂಶ ಪಡೆದುಕೊಂಡಿದೆ.

ತಾಲೂಕಿನ ಮೂಡುಬಿದಿರೆ ವಲಯ 91.65 ಶೇ.ಫಲಿತಾಂಶ ಗಳಿಸಿದೆ. ಈ ವಲಯದಲ್ಲಿ 950 ಗಂಡು ಮಕ್ಕಳು, 882 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಈ ಪೈಕಿ 846 ಗಂಡು ಮಕ್ಕಳು 833 ಹೆಣ್ಣು ಮಕ್ಕಳು ಒಟ್ಟು 1,679 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ವಲಯದಲ್ಲಿ 9 ಶಿಕ್ಷಣ ಸಂಸ್ಥೆಗಳು ಶೇ.100 ಫಲಿತಾಂಶ ದಾಖಲಿಸಿದೆ. ಸರಕಾರಿ ಪ್ರೌಡಶಾಲೆಗಳ ಪೈಕಿ ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆ ಮತ್ತು ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ಪುನವರ್ಸತಿ ಶಾಲೆ, ಅನುದಾನಿತ ಪ್ರೌಢಶಾಲೆಗಳ ಪೈಕಿ ತಾಕೊಡೆ ಆದರ್ಶ ಪ್ರೌಢಶಾಲೆ ಹಾಗೂ ಅನುದಾನರಹಿತ ಪ್ರೌಢಶಾಲೆಗಳಲ್ಲಿ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅಲಂಗಾರು ಸೈಂಟ್ ಥಾಮಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿದ್ಯಾಗಿರಿ ಆಳ್ವಾಸ್ ಕನ್ನಡ ಪ್ರೌಢಶಾಲೆ, ಬೆಳುವಾಯಿ ಬ್ಲೋಸಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶಿರ್ತಾಡಿ ವೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 100 ಶೇ. ಫಲಿತಾಂಶ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News