×
Ad

ಬಾಲಿವುಡ್ ನ ಈ ಶ್ರೇಷ್ಠ ಗಾಯಕನನ್ನು ಒಬ್ಬರೂ ಗುರುತಿಸಲಿಲ್ಲ !

Update: 2016-05-17 19:19 IST

ಬಾಲಿವುಡ್ ಸೆಲೆಬ್ರಿಟಿಗಳು ಯಾವಾಗಲೂ ಆಕಾಶದಲ್ಲೇ ಇರುತ್ತಾರೆ, ತಮ್ಮ ಅಭಿಮಾನಿಗಳ ಜೊತೆ  ಅವರಿಗೆ ಯಾವುದೇ ಭಾವನಾತ್ಮಕ ಸಂಬಂಧ ಇಲ್ಲ ಎಂದು ನೀವು ತಿಳಿದುಕೊಂಡಿದ್ದರೆ ಈ ವರದಿ ಓದಿ. ಬಾಲಿವುಡ್ ನ ಶ್ರೇಷ್ಠ ಕಲಾವಿದನೊಬ್ಬ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಜನರನ್ನು ರಂಜಿಸಿದ್ದಾರೆ. ಆದರೆ ಜನರು ಅವರಿಗೆ ಕ್ಯಾರೇ ಅನ್ನಲಿಲ್ಲ ! ಆ ಕಲಾವಿದ ನಂಬರ್ ಒನ್  ಗಾಯಕ ಸೋನು ನಿಗಮ್ ! ಅವರನ್ನು ಜನ ನಿರ್ಲಕ್ಷಿಸಲು ಕಾರಣ ಅವರು ಮಾರು ವೇಷದಲ್ಲಿದ್ದದ್ದು !
ಸಿನೆಮಾದ ಪ್ರಾಸ್ಥೆಟಿಕ್ಸ್ ಬಳಸಿ ಮೆಕ್ ಅಪ್ ಮಾಡಿ ತಮ್ಮ ಗುರುತು ಸಂಪೂರ್ಣ ಬದಲಿಸಿಕೊಂಡಿದ್ದರು. ಮುಂಬೈ ನ ಜುಹೂ ನಲ್ಲಿರುವ ಮರವೊಂದರ ಕೆಳಗೆ ತಮ್ಮ ಹಾರ್ಮೋನಿಯಂ ಜೊತೆ ಕುಳಿತ ಸೋನು ತಮ್ಮ ಖ್ಯಾತ ಹಾಡು ಕಲ್ ಹೊ ನಾ ಹೊ ಚಿತ್ರದ " ಹರ್ ಘಡಿ ಬದಲ್ ರಹೀ ಹೈ ರೂಪ್ ಝಿಂದಗಿ " ಹಾಡಲು ಪ್ರಾರಂಭಿಸಿದರು . ಆಗ ಸಣ್ಣ ಗುಂಪು ಸೇರಿತು. ಕೆಲವರು ಅವರ ಮಧುರ ಕಂಠ ವನ್ನು ಹೊಗಳಿದರು . ಆದರೆ ಯಾರೂ ಅವರನ್ನು ಗುರುತಿಸಲಿಲ್ಲ. 


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News