ಕಾರ್ಕಳ: ಗಾಳಿ ಮಳೆಯಿಂದಾಗಿ ಭಾರೀ ಹಾನಿ

Update: 2016-05-17 14:18 GMT

ಕಾರ್ಕಳ, ಮೇ 17: ಕಾರ್ಕಳ ತಾಲೂಕಿನ ಬೈಲೂರು, ನೀರೆ, ಕಣಜಾರು ಮತ್ತು ಕುಕ್ಕುಂದೂರಿನಲ್ಲಿ ಸೋಮವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಭಾರೀ ಹಾನಿ ಸಂಭವಿಸಿದೆ.

ಬೈಲೂರು ಗ್ರಾಮದ ಸೀತಾ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿಯಾಗಿ 15 ಸಾವಿರ ರೂ., ದಿವಾಕರ ವಾಸು ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿಯಾಗಿ 15 ಸಾವಿರ ರೂ., ವಿಠಲ ಸಾಲ್ಯಾನ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿ 5 ಸಾವಿರ ರೂ., ಇಂದಿರಾ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿಯಾಗಿ 3 ಸಾವಿರ ರೂ., ರತ್ನಾಕರ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿಯಾಗಿ 3 ಸಾವಿರ ರೂ., ಭಾಗಿ ಹರಿಜನ ಮನೆಗೆ ಭಾಗಶಃ ಹಾನಿಯಾಗಿ 5 ಸಾವಿರ ರೂ., ಕರುಣಾಕರ ಶೆಟ್ಟಿ ಅವರ ಅಡಿಕೆ ಮತ್ತು ತೆಂಗು ಕೃಷಿ ನಾಶವಾಗಿ 15 ಸಾವಿರ ರೂ., ಕೃಷ್ಣ ಮಡಿವಾಳ ಅವರ ಅಡಿಕೆ ಮತ್ತು ತೆಂಗು ಕೃಷಿಗೆ ಹಾನಿಯಾಗಿ 15 ಸಾವಿರ ರೂ., ಉಮೇಶ್ ಶೆಟ್ಟಿ ಅವರ ಅಡಿಕೆ ಮತ್ತು ತೆಂಗು ಕೃಷಿ ನಾಶವಾಗಿ 15 ಸಾವಿರ ರೂ. ನಷ್ಟ ಸಂಭವಿಸಿದೆ.

ನೀರೆ ಗ್ರಾಮದ ಸುಶೀಲ ಎಂಬವರ ಮನೆಗೆ ಭಾಗಶಃ ಹಾನಿಯಾಗಿ 3 ಸಾವಿರ ರೂ., ಗಿರಿಜಾ ರಾಣೇರ ಅವರ ಮನೆಗೆ ಭಾಗಶಃ ಹಾನಿಯಾಗಿ 15 ಸಾವಿರ ರೂ. ನಷ್ಟ ಸಂವಿಸಿದೆ. ಕಣಜಾರು ಗ್ರಾಮದ ಕಮಲ ನಾಯ್ಕಾ ಎಂಬವರ ಮನೆಗೆ ಭಾಗಶಃ ಹಾನಿಯಾಗಿ 15 ಸಾವಿರ ರೂ., ಸುಶೀಲ ದೇವಾಡಿಗ ಅವರ ಮನೆಗೆ ಭಾಗಶಃ ಹಾನಿಯಾಗಿ 7 ಸಾವಿರ ರೂ. ನಷ್ಟ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ನಿವಾಸಿಗಳಾದ ಅಮಣು ನಲ್ಕೆ, ಪಾರ್ವತಿ, ಜಯಂತಿ, ಶಾಂತ, ಸಂಕ್ರಿ ಶೆಟ್ಟಿ, ವಸಂತಿ, ನಾರಾಯಣ ಶೆಟ್ಟಿ, ಜಯ ಶೆಟ್ಟಿ, ಲಕ್ಷ್ಮೀ, ರಾಮ ಶೆಟ್ಟಿ, ಸುಂದರ ಹಾಂಡ, ಸಂಕ್ರಿ ಪೂಜಾರಿ, ಪುಷ್ಪಾ ಮುಂತಾದವರ ಮನೆಗೂ ಹಾನಿ ಸಂಭವಿಸಿದೆ. ಅಲ್ಲದೆ ಅನೇಕ ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ವಿದ್ಯುತ್ ಸಂಪರ್ಕ ಕೂಡಾ ಕಡಿತವಾಗಿದೆ.

ಹಾನಿಗೊಳಗಾದ ಮನೆಗಳಿಗೆ ಕ್ಷೇತ್ರ ತಹಶೀಲ್ದಾರ್ ರಾಘವೇಂದ್ರ ಎಸ್. ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿ.ಪಂ.ಸದಸ್ಯ ಸುಮಿತ್ ಶೆಟ್ಟಿ, ತಾ.ಪಂ.ಸದಸ್ಯರಾದ ಅಶೋಕ್ ಶೆಟ್ಟಿ, ನಿರ್ಮಲ ರಾಣೆ, ನೀರೆ ಗ್ರಾ.ಪಂ.ಅಧ್ಯಕ್ಷ ಸದಾನಂದ ಪ್ರಭು, ಬೈಲೂರು ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಸಂತೋಷ್ ಬೈಲೂರು, ಯೋಗೀಶ್ ಮತ್ತು ರವಿ ಶೆಟ್ಟಿ ಕೊಲ್ಲಬೆಟ್ಟು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News