ಕಾರ್ಕಳ: ಅತಿ ಭಾರ ಹೊತ್ತು ಸಂಚರಿಸುತ್ತಿದ್ದ ಲಾರಿಗಳು ವಶಕ್ಕೆ

Update: 2016-05-17 14:21 GMT

ಕಾರ್ಕಳ, ಮೇ 17: ಅತಿಭಾರವನ್ನು ಹೊತ್ತುಕೊಂಡು ಹೋಗುತ್ತಿದ್ದ 13ಕ್ಕೂ ಮಿಕ್ಕಿದ ಲಾರಿಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಗುರುಪುರ ಹೊಳೆಯಿಂದ ಮರಳು ಸಾಗಿಸುತ್ತಿದ್ದ ಈ ಲಾರಿಗಳನ್ನು ಕಾರ್ಕಳ ತಾಲೂಕಿನ ಬಜಗೋಳಿ ಚೆಕ್‌ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ. ಇವೆಲ್ಲ ಲಾರಿಗಳು ಕುದುರೆಮುಖ ಮಾರ್ಗವಾಗಿ ತೆರಳುತ್ತಿದ್ದವು.

ವಶಪಡಿಸಿಕೊಂಡ ಲಾರಿಗಳನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಗ್ರಾಮಾಂತರ ಠಾಣಾ ಪಿಎಸ್ಸೈ ರಫೀಕ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News