ಎಸೆಸೆಲ್ಸಿ: ಬೆಳ್ತಂಗಡಿ ತಾಲೂಕಿಗೆ ಶೇ. 87.98 ಫಲಿತಾಂಶ

Update: 2016-05-17 14:29 GMT

ಬೆಳ್ತಂಗಡಿ, ಮೇ 17: ತಾಲೂಕಿನಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 87.98 ಫಲಿತಾಂಶ ಬಂದಿದೆ. ಆರು ಸರಕಾರಿ ಶಾಲೆಗಳು ಸೇರಿದಂತೆ 14 ಶಾಲೆಗಳು ಶೇ.100 ಫಲಿತಾಂಶವನ್ನು ಪಡೆಯುವ ಮೂಲಕ ಉತ್ತಮ ಸಾಧನೆಯನ್ನು ಮಾಡಿದೆ.

ತಾಲೂಕಿನಲ್ಲಿ ಪರೀಕ್ಷೆ ಬರೆದ 4,236 ಮಂದಿ ವಿದ್ಯಾರ್ಥಿಗಳಲ್ಲಿ 3,727 ಮಂದಿ ಉತ್ತೀರ್ಣರಾಗಿದ್ದಾರೆ. 91.93 ಶೇ. ಬಾಲಕಿಯರು ಉತ್ತೀರ್ಣರಾಗಿದ್ದರೆ, 84.35 ಶೇ. ಬಾಲಕರು ಉತ್ತೀರ್ಣರಾಗಿದ್ದಾರೆ.

ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಸತತ ಐದನೆ ಬಾರಿ ಶೇ.100 ಫಲಿತಾಂಶವನ್ನು ಪಡೆಯುವ ಮೂಲಕ ತಾಲೂಕಿನ ಅತ್ಯುತ್ತಮ ಶಾಲೆ ಎಂಬ ಹಿರಿಮೆಯನ್ನು ಉಳಿಸಿಕೊಂಡಿದೆ. ಇಲ್ಲಿ 82 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸರಕಾರಿ ಪ್ರೌಢ ಶಾಲೆ ನೇಲ್ಯಡ್ಕ, ಸರಕಾರಿ ಪ್ರೌಢ ಶಾಲೆ ಪೆರ್ಲಬೈಪಾಡಿ, ಮೊರಾರ್ಜಿದೇಸಾಯಿ ವಸತಿ ಶಾಲೆ ಮಚ್ಚಿನ, ಸರಕಾರಿ ಪ್ರೌಢ ಶಾಲೆ ಸವಣಾಲು, ಸರಕಾರಿ ಪ್ರೌಢ ಶಾಲೆ ಬುಳೇರಿ ಶೇ.100 ಫಲಿತಾಂಶವನ್ನು ಪಡೆದುಕೊಂಡಿದೆ.

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು, ಸರಸ್ವತಿ ಆಂಗ್ಲಮಾಧ್ಯಮ ಶಾಲೆ ಮುಂಡಾಜೆ, ಸೈಂಟ್ ಮೇರೀಸ್ ಪ್ರೌಢಶಾಲೆ ಲಾಲ, ದಿವ್ಯಜ್ಯೋತಿ ಆಂಗ್ಲಮಾಧ್ಯಮ ಶಾಲೆ ಕಾಯರ್ತಡ್ಕ, ವಾಣಿ ಆಂಗ್ಲಮಾಧ್ಯಮ ಶಾಲೆ ಬೆಳ್ತಂಗಡಿ, ಸೈಂಟ್ ಪೀಟರ್ ಶಾಲೆ ಅಳದಂಗಡಿ, ಹಾಗೂ ಸೈಂಟ್ ಸಾವಿಯೋ ಬೆಂದ್ರಾಳ ಶಾಲೆಗಳು ಶೇ.100 ಫಲಿತಾಂಶವನ್ನು ಪಡೆದುಕೊಂಡಿವೆ.

ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಸೈಂಟ್ ಮೇರೀಸ್ ಲಾಲದ ಸುಶ್ರುತ್ ಯು.ಕೆ. 624 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ ಉಜಿರೆ ಎಸ್.ಡಿ.ಎಂ. ಶಾಲೆಯ ಅವಿನಾಶ್ 622 ಅಂಕಗಳೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಪೂಂಜಾಲಕಟ್ಟೆಯ ನಿಶಾ ಹಾಗೂ ಮುಂಡಾಜೆ ಪ್ರೌಢ ಶಾಲೆಯ ಮಧುಶ್ರೀ ತಲಾ 616 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನಿಗಳಾಗಿದ್ದಾರೆ. ತಾಲೂಕಿನಲ್ಲಿ 278 ಮಂದಿ ಎ+ ಶ್ರೇಣಿಯನ್ನು ಪಡೆದುಕೊಂಡರೆ 728 ಮಂದಿ ಎ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಲೂಕಿನಲ್ಲಿ ಸರಕಾರಿ ಶಾಲೆಗಳು ಉತ್ತಮ ಫಲಿತಾಂಶ ದಾಖಲಿಸುವುದರ ನಡುವೆಯೂ ತಾಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜು ಕಾಲೇಜು ಶೇ.55.22 ಫಲಿತಾಂಶದೊಂದಿಗೆ ತಾಲೂಕಿನಲ್ಲಿ ಕೊನೆಯ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News