×
Ad

4, 5ನೆ ತರಗತಿ ಕಲಿತ ವಿದ್ಯಾರ್ಥಿಗಳು ಎಸೆಸೆಲ್ಸಿ ಪಾಸ್

Update: 2016-05-17 20:28 IST

ಮಂಗಳೂರು, ಮೇ 17: ಪ್ರಾಥಮಿಕ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೆ ತ್ಯಜಿಸಿದ ವಿದ್ಯಾರ್ಥಿಗಳಿಬ್ಬರು ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಬರೆದು ಸಾಧನೆಗೈದಿದ್ದಾರೆ.

ನಾಲ್ಕನೆ ತರಗತಿ ಕಲಿತು ಬಂದ ಎಂ. ಇಲ್ಯಾಸ್ ಹಾಗೂ ಐದನೆ ತರಗತಿ ಕಲಿತು ಬಂದ ಅಹ್ಮದ್ ರಹ್‌ಮಿ ಎಂಬ ವಿದ್ಯಾರ್ಥಿಗಳು ಮಂಗಳೂರಿನ ಸ್ಟೇಟ್‌ಬ್ಯಾಂಕ್ ಸಮೀಪದ ಪಯೋನಿರ್ ಕಾಂಪ್ಲೆಕ್ಸ್‌ನಲ್ಲಿ ಇರುವ ನ್ಯಾಷನಲ್ ಟ್ಯುಟೋರಿಯಲ್ಸ್‌ನಲ್ಲಿ ನೇರವಾಗಿ ಹತ್ತನೆ ಕಲಿತು ಒಂದೇ ವರ್ಷದಲ್ಲಿ ತೇರ್ಗಡೆಯಾಗಿ ಕ್ರಮವಾಗಿ 303 ಮತ್ತು 429 ಅಂಕಗಳನ್ನು ಗಳಿಸುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ರಹ್‌ಮಿ ಪ್ರಥಮ ಭಾಷೆ ಕನ್ನಡದಲ್ಲಿ 109, ಇಂಗ್ಲೀಷ್‌ನಲ್ಲಿ 84 ಹಾಗೂ ಹಿಂದಿಯಲ್ಲಿ 86 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ ಎಂಬುದಾಗಿ ಸಂಸ್ಥೆಯ ಪ್ರಾಂಶುಪಾಲ ಯು.ಎಚ್.ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News