ಬಾಡಿಗೆ ತಾಯಿಯನ್ನು ಬಳಸುವ ಮಹಿಳೆಗೂ 180 ದಿನಗಳ ಹೆರಿಗೆ ರಜೆ

Update: 2016-05-17 15:01 GMT

ಹೊಸದಿಲ್ಲಿ,ಮೇ 17: ಬಾಡಿಗೆ ತಾಯಂದಿರು ಮತ್ತು ಅವರ ಮೂಲಕ ಮಕ್ಕಳನ್ನು ಪಡೆಯುವ ಮಹಿಳೆಯರು ಸರಕಾರಿ ಉದ್ಯೋಗದಲ್ಲಿದ್ದರೆ ಅವರಿಗೂ ಹೆರಿಗೆ ರಜೆಯ ಸೌಲಭ್ಯವನ್ನು ವಿಸ್ತರಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕಳೆದ ಎಪ್ರಿಲ್‌ನಲ್ಲಿ ಸಲ್ಲಿಸಿರುವ ಪ್ರಸ್ತಾವನೆಯೊಂದರ ಬಗ್ಗೆ ಕೇಂದ್ರವು ಚಿಂತನೆ ನಡೆಸುತ್ತಿದೆ. ಇದೇ ವೇಳೆ ಇತ್ತ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣ(ಸಿಎಟಿ)ಯು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದಿರುವ ಮಹಿಳೆಗೆ ಅದರೊಂದಿಗೆ ಅನುಬಂಧ ಬೆಳೆಸಿಕೊಳ್ಳಲು ಸಾಧ್ಯವಾಗುವಂತೆ 180 ದಿನಗಳ ಹೆರಿಗೆ ರಜೆಯನ್ನು ಮಂಜೂರು ಮಾಡುವ ಮೂಲಕ ಮೇಲ್ಪಂಕ್ತಿಯನ್ನು ಹಾಕಿದೆ.
ಭಾರತದಲ್ಲಿ ಪ್ರಸಕ್ತ ಬಾಡಿಗೆ ತಾಯಂದಿರು ಅಥವಾ ಅವರ ಮೂಲಕ ಮಕ್ಕಳನ್ನು ಪಡೆಯುವ ಮಹಿಳೆಯರಿಗೆ ಯಾವುದೇ ಬಗೆಯ ಶಿಶು ಕಾಳಜಿ ರಜೆ ನೀಡಲು ಅವಕಾಶವಿಲ್ಲ.
 ಬಾಡಿಗೆ ತಾಯಿಯಿಂದ ತಾನು ಪಡೆದಿರುವ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ರಜೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದರಿಂದ ದಿಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ನರ್ಸ್ ಓರ್ವರು ಕೆಎಟಿಯ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News