ಒಳಚರಂಡಿ ಸಮಸ್ಯೆಯಿಂದ ಬಾವಿ ನೀರು ಕಲುಷಿತ

Update: 2016-05-17 15:35 GMT

ಕಾರ್ಕಳ, ಮೇ 17: ಒಳ ಚರಂಡಿ ಅವ್ಯವಸ್ಥೆಯಿಂದಾಗಿ ಬಾವಿಗೆ ಕಲುಷಿತ ನೀರು ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಭಾರೀ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪುರಸಭೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಕಾರ್ಕಳ ಪೇಟೆಯ ಮೂರು ಮಾರ್ಗದ ಬಳಿಯ ನಿವಾಸಿ ವಾಲ್ಟರ್ ಡಿಸೋಜ ಆರೋಪಿಸಿದ್ದಾರೆ.

ಕಾರ್ಕಳ ಪುರಸಭಾ ವ್ಯಾಪ್ತಿಗೆ ಒಳಪಟ್ಟ ಡೋರ್ ನಂಬ್ರ 475-ವಾರ್ಡು 3ರ ಮನೆ ಬಳಿಯಿರುವ ಬಾವಿಗೆ ಕೊಳಕು ಸೇರಿಕೊಂಡು ನೀರು ದುರ್ನಾತ ಬೀರುತ್ತಿದೆ. ಅಲ್ಲದೆ ಇದೇ ಬಾವಿಯ ನೀರನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಮನೆಮಂದಿ ಕೂಡಾ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News