ಮೇ 20ರಂದು ಕಟ್ಟತ್ತಾರು ಬದ್ರಿಯಾ ಮಸೀದಿಯ ಉದ್ಘಾಟನೆ

Update: 2016-05-17 15:43 GMT

ಪುತ್ತೂರು, ಮೇ 17: ನುಸ್ರತ್ತುಲ್ ಇಸ್ಲಾಂ ಜಮಾಅತ್ ಕಮಿಟಿಯ ವತಿಯಿಂದ ಕಟ್ಟತ್ತಾರಿನಲ್ಲಿ ನಿರ್ಮಿಸಲಾದ ನೂತನ ಬದ್ರಿಯಾ ಜುಮಾ ಮಸ್ಜಿದ್‌ನ ಉದ್ಘಾಟನಾ ಸಮಾರಂಭವು ಮೇ 20ರಂದು ನಡೆಯಲಿದೆ.

75 ಲಕ್ಷ ರೂ. ವೆಚ್ಚದಲ್ಲಿ ಅರೆಬಿಯನ್ ಶೈಲಿಯಲ್ಲಿ ನಿರ್ಮಾಣಗೊಂಡ ವಿನೂತನ ಶೈಲಿಯ ಮಸೀದಿಯನ್ನು ಪುತ್ತೂರು ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ಉದ್ಘಾಟಿಸುವರು. ಕುಂಬೋಲ್ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಜುಮಾ ನೇತೃತ್ವ ವಹಿಸುವರು. ಸಮಸ್ತ ಕೇಂದ್ರ ಮುಶಾವರದ ಸದಸ್ಯ ಅಲ್ಹಾಜ್ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ವಕ್ಫ್ ಘೋಷಣೆ ಮಾಡುವರು. ಜುಮುಅ ಖುತುಬವನ್ನು ಉಡುಪಿ ಸಂಯುಕ್ತ ಖಾಝಿ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ ನಿರ್ವಹಿಸುವರು. ಕಟ್ಟತ್ತಾರು ಜುಮಾ ಮಸೀದಿ ಅಧ್ಯಕ್ಷ ಪಿ.ಎಂ. ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ರಾಜ್ಯ ವಕ್ಫ್ ಮತ್ತು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್, ಜಿಲ್ಲಾ ವಕ್ಫ್ ಬೋರ್ಡು ಸಲಹಾ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್, ಯೆನೆಪೊಯ ಯುನಿವರ್ಸಿಟಿಯ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಹಾಜಿ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News