ಉಪ್ಪಿನಂಗಡಿ: ಮೇ 19ರ ಜಿಲ್ಲಾಬಂದ್‌ಗೆ ತುಳುನಾಡ ಒಕ್ಕೂಟದ ಬೆಂಬಲ

Update: 2016-05-17 15:53 GMT

ಉಪ್ಪಿನಂಗಡಿ, ಮೇ 17: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ 19ರಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಕರೆ ನೀಡಿರುವ ಬಂದ್‌ಗೆ ತುಳುನಾಡ ಒಕ್ಕೂಟದ ಉಪ್ಪಿನಂಗಡಿ ಘಟಕ ಬೆಂಬಲ ವ್ಯಕ್ತಪಡಿಸಿದೆ.

ಈ ಬಾರಿ ಕರಾವಳಿ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದ್ದು, ಇಲ್ಲಿನ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ನೀರಿಲ್ಲದೆ ಬತ್ತಿಹೋಗಿವೆ. ಆದರೂ, ಕರಾವಳಿ ಪ್ರದೇಶಗಳನ್ನು ಕಡೆಗಣಿಸಿ ಎತ್ತಿನಹೊಳೆ ಯೋಜನೆ ಮೂಲಕ ಇಲ್ಲಿನ ಜೀವನದಿಗಳ ನೀರನ್ನು ಕಸಿಯಲು ಸರಕಾರಗಳು ಮುಂದಾಗಿವೆ. ಇದರಿಂದ ಇಲ್ಲಿನ ಜನತೆ ಸಂಕಷ್ಟಕ್ಕೀಡಾಗಿದ್ದಾರೆ.

ತುಳುನಾಡಿನ ನೆಲ-ಜಲದ ಉಳಿವಿಗಾಗಿ ಜಾತಿ- ಧರ್ಮ, ಪಕ್ಷ -ಬೇಧ ಮರೆತು ನಾವೆಲ್ಲರೂ ಹೋರಾಡಬೇಕಿದ್ದು, ಈ ನಿಟ್ಟಿನಲ್ಲಿ ತುಳುನಾಡ ಒಕ್ಕೂಟದ ಉಪ್ಪಿನಂಗಡಿ ಘಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘಟಕದ ಅಧ್ಯಕ್ಷ ಶೇಖರ್ ಗೌಂಡತ್ತಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News