ಮಂಜೇಶ್ವರ: ವಿವಾಹಿತ ಆತ್ಮಹತ್ಯೆ
Update: 2016-05-17 22:05 IST
ಮಂಜೇಶ್ವರ, ಮೇ 17: ತನ್ನ ಪತ್ನಿಯ ಮನೆಗೆ ಬಂದ ಚೆರ್ವತ್ತೂರು ನಿವಾಸಿ ಯುವಕನೋರ್ವ ಬಾವಿಯ ದಂಡೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಚೆರ್ವತ್ತೂರು ಕೊವ್ವಲ್ ನಿವಾಸಿ ಕುಟ್ಟಿಕೃಷ್ಣನ್ ಎಂಬವರ ಪುತ್ರ ಶ್ರೀಜಿತ್(35)ನೇಣಿಗೆ ಶರಣಾದ ಯುವಕ.
ವೆಲ್ಡಿಂಗ್ ಕಾರ್ಮಿಕನಾಗಿದ್ದ ಶ್ರೀ ಜಿತ್ ಇತ್ತೀಚೆಗೆ ಕಣ್ವತೀರ್ಥ ಬೀಚ್‌ನಲ್ಲಿರುವ ಪತ್ನಿ ನಮಿತಾರ ಮನೆಗೆ ಬಂದಿದ್ದರು. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ಶ್ರೀಜಿತ್ ರವಿವಾರ ಬೆಳಗ್ಗೆ ನಾಪತ್ತೆಯಾಗಿದ್ದರು.
ಮನೆಯವರು ಹುಡುಕಾಟ ನಡೆಸಿದಾಗ ಮನೆ ಸನಿಹದ ಬಾವಿಯ ದಂಡೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.