×
Ad

ನೇಪಾಳ: ಪೊಲೀಸರ ವಿರುದ್ಧ ಸಂಘರ್ಷಕ್ಕಿಳಿದ ಮದೇಸಿಗಳು

Update: 2016-05-17 23:33 IST

ಕಠ್ಮಂಡು, ಮೇ 17: ನೇಪಾಳದ ನೂತನ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ಕೋರಿ ಮದೇಸಿ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಮಂಗಳವಾರ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಅದೇ ವೇಳೆ, ಪ್ರತಿಭಟನೆ ಹಿಂಸಾತ್ಮಕವಾದರೆ ಸರಕಾರ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಪ್ರಧಾನಿ ಕೆ.ಪಿ. ಒಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯ ಮೂರನೆ ದಿನವಾದ ಮಂಗಳವಾರ ಸರಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನೆಕಾರರು ಪ್ರಧಾನಿ ಕಚೇರಿಯ ಸಮೀಪ ಧರಣಿ ನಡೆಸಿದರು ಹಾಗೂ ಪೊಲೀಸ್ ತಡೆಬೇಲಿಗಳನ್ನು ಮುರಿಯಲು ಪ್ರಯತ್ನಿಸಿದರು.
 ಆಗ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಸಂದರ್ಭದಲ್ಲಿ ಹಲವಾರು ಪ್ರತಿಭಟನಾಕಾರರು ಹಾಗೂ ಪಾದಚಾರಿಗಳು ಗಾಯಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News