ಲಂಕಾ ಭಾರೀ ಮಳೆ: 2 ಲಕ್ಷ ನಿರಾಶ್ರಿತರು
Update: 2016-05-17 23:34 IST
ಕೊಲಂಬೊ, ಮೇ 17: ಶ್ರೀಲಂಕಾದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ದಿಢೀರ್ ಪ್ರವಾಹದಿಂದ 2 ಲಕ್ಷಕ್ಕೂ ಅಧಿಕ ಮಂದಿ ಪೀಡಿತರಾಗಿದ್ದಾರೆ. ದ್ವೀಪ ರಾಷ್ಟ್ರಾದ್ಯಂತ ಕನಿಷ್ಠ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
‘‘ದ್ವೀಪದ 25 ಜಿಲ್ಲೆಗಳ ಪೈಕಿ 19ರಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ. 47,922 ಕುಟುಂಬಗಳ 2,07,556 ಮಂದಿ ತೊಂದರೆಗೀಡಾಗಿದ್ದಾರೆ’’ ಎಂದು ವಿಪತ್ತು ನಿರ್ವಹಣೆ ಇಲಾಖೆಯ ವಕ್ತಾರರೋರ್ವರು ತಿಳಿಸಿದರು.