×
Ad

ಆರ್ಥಿಕ ಕಾರಿಡಾರ್‌ಗೆ ಪೂರ್ಣ ರಕ್ಷಣೆ

Update: 2016-05-17 23:35 IST

ಬೀಜಿಂಗ್, ಮೇ 17: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಬೀಜಿಂಗ್‌ನಲ್ಲಿ ಚೀನಾದ ಉನ್ನತ ನಾಯಕರನ್ನು ಭೇಟಿಯಾಗಿ, ಮಹತ್ವಾಕಾಂಕ್ಷೆಯ 460 ಕೋಟಿ ಡಾಲರ್ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ಗೆ ಸಂಪೂರ್ಣ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆ.
 ಈ ಕಾರಿಡಾರ್ ಅಶಾಂತ ಪರಿಸ್ಥಿತಿಯಿರುವ ಬಲೂಚಿಸ್ತಾನ ಪ್ರಾಂತವನ್ನು ಹಾದು ಹೋಗಲಿದೆ.
ಚೀನಾಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ಜ. ಶರೀಫ್ ಸೋಮವಾರ ಪ್ರಧಾನಿ ಲಿ ಕೆಕಿಯಾಂಗ್ ಮತ್ತು ಸೆಂಟ್ರಲ್ ಮಿಲಿಟರಿ ಕಮಿಶನ್‌ನ ಉಪಾಧ್ಯಕ್ಷ ಫಾನ್ ಚಂಗ್‌ಲಾಂಗ್‌ರನ್ನು ಭೇಟಿಯಾದರು.
  ಪರಸ್ಪರ ತರಬೇತಿಯನ್ನು ಹೆಚ್ಚಿಸುವುದು, ರಕ್ಷಣಾ ತಂತ್ರಜ್ಞಾನ ಮತ್ತು ಬೇಹುಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ಪಾಕ್ ಸೇನಾ ಮುಖ್ಯಸ್ಥರು ಚೀನಾದ ಅಧಿಕಾರಿಗಳೊಂದಿಗೆ ಚರ್ಚಿಸಿದರು ಎಂದು ಪಾಕಿಸ್ತಾನದ ಸೇನಾ ವಕ್ತಾರ ಲೆ.ಜ. ಆಸಿಮ್ ಬಜ್ವ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News