ರಾಜ್ಯಮಟ್ಟದ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್: ಶೀತಲ್, ಅಪೇಕ್ಷಾ, ರಘು, ಮಯೂರೇಶ್‌ಗೆ ಪ್ರಶಸ್ತಿ
ಉಡುಪಿ, ಮೇ 17: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಪ್ರಕಾಶ್ ಕೊಡವೂರು ಸ್ಮರಣಾರ್ಥ ಕರ್ನಾಟಕ ರಾಜ್ಯ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನ ಮೆಂಟ್‌ನಲ್ಲಿ ಅಗ್ರ ಶ್ರೇಯಾಂಕಿತರಾದ ಬೆಂಗಳೂರಿನ ಶೀತಲ್, ಅಪೇಕ್ಷಾ ನಾಯಕ್, ರಘು ಎಂ., ಮಯೂರೇಶ್ ಜನ್‌ಪಂಡಿತ್ ಪ್ರಶಸ್ತಿ ಗೆದ್ದುಕೊಂಡರು.
17 ವರ್ಷ ಕೆಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರು ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಮಯೂರೇಶ್ ಜನ್‌ಪಂಡಿತ್ ಬೆಂಗಳೂರಿನ ರಾಜನ್ಸ್ ಬಿಎಯ ತೇಜಸ್ ಕಲ್ಲೋಲ್ಕರ್ ಅವರನ್ನು 8-21, 21-18, 21-14 ಅಂಕಗಳ ಅಂತರದಲ್ಲಿ ಸೋಲಿಸಿದರು. ಬಾಲಕರ ಡಬಲ್ಸ್‌ನಲ್ಲಿ ಮಯೂರೇಶ್ ಜನ್‌ಪಂಡಿತ್- ಸಾಯಿಪ್ರತೀಕ್ ಕೃಷ್ಣ ತಮ್ಮ ಎದುರಾಳಿ ಅನಿರುದ್ಧ ರಾಜೀವ್-ಸಕೇತ್ ಉಪಾಧ್ಯಾಯ ಅವರನ್ನ 21-16, 21-19 ಸೆಟ್‌ಗಳೊಂದಿಗೆ ಮಣಿಸಿದರು.
ಬಾಲಕಿಯರ ಸಿಂಗಲ್‌ನಲ್ಲಿ ಬೆಂಗಳೂರಿನ ಡಿವೈಇಎಸ್‌ನ ಶೀತಲ್ ಡಿ. ಅದೇ ಸಂಸ್ಥೆಯ ಮೇಧಾ ಶಶಿಧರನ್ ಅವರನ್ನು 21-15, 21-19 ನೇರ ಸೆಟ್‌ಗಳೊಂದಿಗೆ ಸೋಲಿಸಿದರು. ಬಾಲಕಿಯರ ಡಬಲ್ಸ್‌ನಲ್ಲಿ ರಮ್ಯಾ ಸಿ.ವಿ.- ಶೀತಲ್ ಡಿ. ಅವರು 21-14, 21-11 ಅಂಕಗಳೊಂದಿಗೆ ಆಂಚಲ್ ಧವನ್- ದೀತ್ಯಾರನ್ನು ಮಣಿಸಿದರು.
19 ವರ್ಷ ಕೆಳಗಿನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಮೈಸೂರಿನ ಆರ್‌ಬಿಎಯ ರಾಘು ಎಂ. ಎದುರಾಳಿ ಅಗ್ರ ಶ್ರೇಯಾಂಕಿತ ಬೆಂಗಳೂರಿನ ಎಎ್ನ ಬಾಲ್‌ರಾಜ್ ಕಜ್ಲಾ ಅವರನ್ನು 21-17, 14-21, 21-11 ಅಂಕಗಳಿಂದ ಸೋಲಿಸಿದರು. ಬಾಲಕರ ಡಬಲ್ಸ್ ನಲ್ಲಿ ಕುಶಲ್ ರಾಜ್- ರಾಹುಲ್ ಪ್ರಸಾದ್ ತಮ್ಮ ಎದು ರಾಳಿ ಗ್ಲಾನಿಸ್ ಅಸ್ಲಿ ಪಿಂಟೋ- ಸ್ೈ ಅಲಿ ಅವರನ್ನು 21-19, 21-14 ಅಂಕಗಳಲ್ಲಿ ಸೋಲಿ ಸಿದರು. ಬಾಲಕಿಯರ ಸಿಂಗಲ್ಸ್‌ನಲ್ಲಿ ಡಿವೈಇಎಸ್‌ನ ಅಪೇಕ್ಷಾ ನಾಯಕ್ ತನ್ನ ಎದುರಾಳಿ ಅರ್ಚನಾ ಪೈ ಅವರನ್ನು 12-21, 21-10, 21-10 ಅಂಕಗಳಿಂದ ಸೋಲುಣಿಸಿದರು.
ಡಬಲ್ಸ್‌ನಲ್ಲಿ ಅಪೇಕ್ಷಾ ನಾಯಕ್- ಅರ್ಚನಾ ಪೈ ಅವರು ಅನನ್ಯಾ ಪ್ರವೀಣ್- ಮೇಧಾ ಶಶಿಧರನ್‌ರನ್ನು 19-21, 21-17, 21-18 ಅಂಕಗಳಿಂದ ಸೋಲಿಸಿದರು. ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಕಿರಣ್- ಅಪೇಕ್ಷಾ ನಾಯಕ್ ತಂಡ ಗ್ಲಾನಿಸ್ ಅಸ್ಲೆ ಪಿಂಟೋ- ಅಶ್ಮಾ ಗ್ಲಾನಿಸ್ ಪಿಂಟೋ ತಂಡವನ್ನು 21-18, 21-19 ಸೆಟ್‌ಗಳಿಂದ ಮಣಿಸಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅೀಕ್ಷಕ ಅಣ್ಣಾಮಲೈ, ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಉದ್ಯಮಿ ರಂಜನ್ ಕಲ್ಕೂರ, ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್ ಪೂಜಾರಿ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ ವೈ. ಸುೀರ್, ಉಪಾಧ್ಯಕ್ಷ ಸೋಹೇಲ್ ಅಮೀನ್, ಜಂಟಿ ಕಾರ್ಯದರ್ಶಿ ಸತೀಶ್ ಮಲ್ಯ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ವೈ.ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.