ಸರ್ಫಿಂಗ್: ಪೂರ್ವಭಾವಿ ಸಭೆ
ಮಂಗಳೂರು, ಮೇ 17: ಸಸಿಹಿತ್ಲು ಬೀಚ್‌ನಲ್ಲಿ ಮೇ 27ರಿಂದ ನಡೆಯಲಿರುವ ರಾಷ್ಟ್ರೀಯ ಸರ್ಫಿಂಗ್ ಕ್ರೀಡಾಕೂಟದ ಸಿದ್ಧತೆಗಳ ಬಗ್ಗೆ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಇದೊಂದು ರಾಷ್ಟ್ರಮಟ್ಟದ ಕ್ರೀಡಾಕೂಟವಾಗಿದೆ. ಸರ್ಫಿಂಗ್ ಕ್ರೀಡೆಯನ್ನು ಆಯೋಜಿಸುವ ಅವಕಾಶ ಜಿಲ್ಲೆಗೆ ದೊರಕಿರುವುದು ಇಲ್ಲಿನ ಕ್ರೀಡಾ ಹಿರಿಮೆಗೆ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ ಇದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾಕಾರಿ ಎ.ಬಿ ಇಬ್ರಾಹಿಂ ಮಾತನಾಡಿ, ಈಗಾಗಲೇ ಸಸಿಹಿತ್ಲು ಬೀಚ್‌ನ್ನು ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತೆ ಕಾಪಾಡಲು ಈ ಪರಿಸರದಲ್ಲಿ ಭದ್ರತೆ ಹಾಕಲಾಗುವುದು. ಸರ್ಫಿಂಗ್ ಕ್ರೀಡಾಳುಗಳಿಗೆ ವಸತಿ, ಭೋಜನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸ ಲಾಗುತ್ತದೆ ಎಂದರು. ಮೇ 27ರಂದು ಬೆಳಿಗ್ಗೆ 9:30 ಗಂಟೆಗೆ ಕ್ರೀಡಾಕೂಟ ಉದ್ಘಾ ಟನೆಯಾಗಲಿದೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಆಹಾರ ಖಾದ್ಯಗಳ ಮಳಿಗೆಗೆ ವ್ಯವಸ್ಥೆ ಮಾಡಲಾಗಿದೆ. ಸಂಚಾರ ಮತ್ತು ಭದ್ರತೆಗೆ ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಮಾಡಲಿದೆ ಎಂದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಎಸ್.ಪಿ. ಶರಣಪ್ಪ, ಸರ್ಫಿಂಗ್ ಕ್ರೀಡಾಕೂಟದ ಪ್ರತಿನಿಗಳು, ಯತೀಶ್ ಬೈಕಂಪಾಡಿ ಮತ್ತಿತರರು ಭಾಗವಹಿಸಿದ್ದರು.