ಮುಲ್ಕಿ: ಸಾಹಿತ್ಯ ಸಂಜೆ ಕಾರ್ಯಕ್ರಮ
ಮುಲ್ಕಿ, ಮೇ 17: ಇಲ್ಲಿನ ಶಾಂಭವೀ ಸಾಹಿತ್ಯ ಕಲಾ ವೇದಿಕೆ ಮುಲ್ಕಿ ಮತ್ತು ಮುಲ್ಕಿ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಐಸಿರಿ ವೇದಿಕೆಯಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ವಹಿಸಿದ್ದರು.
ಹಿರಿಯ ವಿದ್ವಾಂಸ ಡಾ.ಸೋಂದಾ ಭಾಸ್ಕರ ಭಟ್, ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ಬಲ್ಲಿರೇನಯ್ಯ ಯಕ್ಷ ಮಾಸಿಕದ ಸಂಪಾದಕ ಮತ್ತು ಯಕ್ಷ ಕಲಾವಿದ ತಾರಾನಾಥ ವರ್ಕಾಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕವಿಗಳಾದ ಅಂಡಾರು ಗಂಗಾಧರ ಶೆಟ್ಟಿ, ಸೌದಾಮಿನಿ, ಪ್ರೊ.ಸುಧಾರಾಣಿ, ಡಾ.ಹರಿ ಪ್ರಸಾದ್ ಶೆಟ್ಟಿ, ರಾಜಲಕ್ಷ್ಮಿ ಜಿಂಗಾದೆ, ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಯುಗಪುರುಷ ಪ್ರಧಾನ ಸಂಪಾದಕ .ಕೆ.ಭುವನಾಭಿರಾಮ ಉಡುಪ, ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಉದ್ಯಮಿ ಜೀವನ್.ಕೆ.ಶೆಟ್ಟಿ, ಮುಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ, ಶಾಂಭವೀ ಸಾಹಿತ್ಯ ಕಲಾ ವೇದಿಕೆಯ ಅಧ್ಯಕ್ಷ ಎನ್.ಪಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.