×
Ad

ಅನುರಾಗ್‌ ಠಾಕೂರ್ ಬಿಸಿಸಿಐ ಅಧ್ಯಕ್ಷ ?

Update: 2016-05-18 11:12 IST

ಹೊಸದಿಲ್ಲಿ, ಮೇ 18: ಬಿಜೆಪಿ ಎಂಪಿ ಅನುರಾಗ್‌ ಠಾಕೂರ್‌  ಅವರುಛರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಶಶಾಂಕ್‌ ಮನೋಹರ್‌ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್‌ ಠಾಕೂರ‍್ ಪ್ರಮುಖ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದಾರೆ.
ಅನುರಾಗ್‌ ಠಾಕೂರ್‌  ಅವರಿಗೆ ಪೂರ್ವ ವಲಯದ ಆರು ಕ್ರಿಕೆಟ್‌ ಸಂಸ್ಥೆಗಳು  ಬೆಂಬಲ ವ್ಯಕ್ತಪಡಿಸಿದೆ. ನ್ಯಾಶನಲ್‌ ಕ್ರಿಕೆಟ್‌ ಕ್ಲಬ್‌ ಆಫ್‌ ಕೋಲ್ಕತಾ, ಬಂಗಾಳ, ಒಡಿಶಾ, ಜಾರ್ಖಂಡ್‌, ಅಸ್ಸಾಂ , ತ್ರಿಪುರಾ ಕ್ರಿಕೆಟ್‌ ಸಂಸ್ಥೆಗಳು ಅನುರಾಗ್‌ ಠಾಕೂರ‍್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿವೆ  ಎಂದು ತಿಳಿದು ಬಂದಿದೆ.
ಒಂದು ವೇಳೆ ಅನುರಾಗ್‌ ಠಾಕೂರ್‌ ಬಿಸಿಸಿಐ ಅಧ್ಯಕ್ಷರಾದರೆ ತೆರವಾಗುವ ಕಾರ್ಯದರ್ಶಿ ಸ್ಥಾನಕ್ಕೆ ಅಜಯ್‌ ಶಿರ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News