×
Ad

ಕೇರಳದಲ್ಲಿ ಭೀಕರ ಬಿರುಗಾಳಿ ಸಾಧ್ಯತೆ!: ಮಳೆ ಮುಂದುವರಿಯುತ್ತಿದೆ!

Update: 2016-05-18 11:57 IST

ತಿರುವನಂತಪುರಂ, ಮೇ 18:ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರದ ಹಿನ್ನೆಲೆಯಲ್ಲಿ ತಮಿಳ್ನಾಡು ಕರಾವಳಿಗೆ ಅದು ಬಂದಿರುವುದರಿಂದ ಕೇರಳದ ಕರಾವಳಿ ಪ್ರದೇಶದಲ್ಲಿ50-60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ನಿರೀಕ್ಷಣಾಲಯ ತಿಳಿಸಿದೆ ಎಂದು ವರದಿಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಬೆಸ್ತರು ಸಮುದ್ರಕ್ಕೆ ಇಳಿಯಬಾರದೆಂದು ಎಚ್ಚರಿಕೆಯನ್ನೂ ಅದು ನೀಡಿದೆ.

ಮೇ 19ರವರೆಗೆ ರಾಜ್ಯವ್ಯಾಪಕವಾಗಿ ಭಾರೀ ಮಳೆ ಸುರಿಯಲಿದೆ. ಮುಂದಿನ 48 ಗಂಟೆಗಳ ಕಾಲ ಧಾರಾಳ ಮಳೆ ಸುರಿಯುವ ಸಾಧ್ಯತೆ ಇದೆ.ದಕ್ಷಿಣ ಜಿಲ್ಲೆಗಳಲ್ಲಿ ಎರಡು ದಿವಸಗಳಿಂದ ಕಡಲು ಕೊರೆತ ಮುಂದುವರಿಯುತ್ತಿದೆ. ಮಣ್ಣು ಜರಿಯುವ-ಕುಸಿಯುವ ಸಾಧ್ಯತೆಯಿರುವ ಪ್ರದೇಶಗಳಿಂದ ಜನರನ್ನು ಬೇರೆಡೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. ಅಪಾಯದಿಂದ ಸುರಕ್ಷಿತವಾಗಿರಲು ಸುರಕ್ಷತಾ ಕಾರ್ಯಗಳನ್ನು ಒಗ್ಗೂಡಿಸಲು ಜಿಲ್ಲಾಡಳಿತಗಳಿಗೆ ಲ್ಯಾಂಡ್  ರೆವೆನ್ಯೂ ಕಮಿಶನರ್ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News