×
Ad

ಜಿಶಾ ಕೊಲೆ ಪ್ರಕರಣ: ಆರೊಪಿಗಳೆಂದು ಶಂಕಿತರ ಡಿಎನ್‌ಎ ಫರೀಕ್ಷೆ ಫಲಿತಾಂಶ ಇಂದು ಲಭ್ಯ

Update: 2016-05-18 12:04 IST

ಕೊಚ್ಚಿ,ಮೇ 18: ಪೆರುಂಬಾವೂರಿನ ಕಾನೂನು ವಿದ್ಯಾರ್ಥಿನಿ ಜಿಶಾ ಹತ್ಯೆ ಪ್ರಕರಣದಲ್ಲಿ ಶಂಕಿತರ ಡಿಎನ್‌ಎ ಪರೀಕ್ಷೆ ಫಲಿತಾಂಶ ಬುಧವಾರ ದೊರಕಲಿದ್ದು ಈಗ ಪೊಲೀಸ್ ಕಸ್ಟಡಿಯಲ್ಲಿರುವ ಬಂಗಾಳಿ ಯುವಕನ ಸಹಿತ ಆರುಮಂದಿಯ ಉಗುಳು ಮುಂತಾದುವುಗಳನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು ತಿರುವನಂತಪುರಂನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಡಿಎನ್‌ಎ ಪರೀಕ್ಷೆಯ ಫಲಿಂತಾಶ ತನಿಖೆಗೆ ಬಹುದೊಡ್ಡ ತಿರುವು ಆಗಲಿದೆ ಎಂದು ಪೊಲೀಸರು ಭಾವಿಸಿದ್ದಾರೆ. ಡಿಎನ್‌ಎ ಪರೀಕ್ಷೆಯ ಫಲಿತಾಂಶ ಬುಧವಾರ ಲಭಿಸಲಿದೆ ಎಂದು ಎಡಿಜಿಪಿ ಕೆ. ಪದ್ಮಕುಮಾರ್ ಹಾಗೂ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೊಟೆಕ್ನಾಲಜಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವರೆಗೆ ಇನ್ನೂರಷ್ಟು ಮಂದಿಯನ್ನು ಪ್ರಶ್ನಿಸಲಾಗಿದೆ. ಈಗ ಕಳುಹಿಸಿದವರ ಡಿಎನ್‌ಎಯಲ್ಲಿ ಹೋಲಿಕೆಯಿಲ್ಲದಿದ್ದರೆ ಉಳಿದವರನ್ನು ಕರೆಯಿಸಿಕೊಂಡು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ರೂರಲ್ ಎಸ್ಪಿ ಯತೀಶ್ಚಂದ್ರ ಹೇಳಿದ್ದಾರೆ. ಈ ಮೊದಲು ಸಂಗ್ರಹಿಸಿದ್ದ ಮೂರು ಮಂದಿಯ ಡಿಎನ್‌ಎ ಹೋಲಿಕೆಯಾಗಿರಲಿಲ್ಲ.

ಈ ತನ್ಮಧ್ಯೆ ತನ್ನ ಮೊಬೈಲ್‌ನಿಂದ ಜಿಶಾ ಕರೆ ಮಾಡಿದ್ದವರ ಪಟ್ಟಿಯನ್ನು ಪೊಲೀಸ್ ಪರಿಶೀಲಿಸಿದ್ದಾರೆ. ಜಿಶಾರ ಗೆಳೆಯರನ್ನು ಮತ್ತೊಮ್ಮೆ ಪ್ರಶ್ನಿಸಲಾದರೂ ಖಚಿತವಾದ ಮಾಹಿತಿಗಳು ಅವರಿಂದ ಲಭಿಸಿಲ್ಲ. ಜಿಶಾರ ಡೈರಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗಿದೆ. ಅದರಲ್ಲಿ ಕೆಲವರ ಹೆಸರಿತ್ತು. ಈ ಹೆಸರಿರುವವರತ್ತಲೂ ತನಿಖೆ ವ್ಯಾಪಿಸಲಿದೆ. ಆದರೆ ಇದು ಡಿಎನ್‌ಎ ಫಲಿತಾಂಶ ಬಂದ ನಂತರ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜಿಶಾರ ಡೈರಿಯಲ್ಲಿ ತನ್ನನ್ನು ಕೊಲ್ಲಲು ಬಂದರು ಎಂದೂ ಅಪಾಯಕ್ಕೊಳಪಡಿಸಿದರೆಂದೂ ಜಿಶಾ ಕೆಲವರ ಹೆಸರನ್ನು ಡೈರಿಯಲ್ಲಿ ಬರೆದಿಟ್ಟಿದ್ದಾರೆನ್ನಲಾಗಿದೆ. ಜಿಶಾರ ಮನೆಯ ಸುತ್ತಮುತ್ತಲು ಇರುವವರ ಬೆರಳಚ್ಚನ್ನು ಪೊಲೀಸರು ಪರಿಶೀಲಿಸಲಿಕ್ಕಾಗಿ ಸಂಗ್ರಹಿಸಿದ್ದರು. ಬೆರಳಚ್ಚನ್ನು ನೀಡದೆ ವೋಟು ಹಾಕದೆ ನಾಪತ್ತೆಯಾದವರಿದ್ದಾರೆಯೇ ಎಂದೂ ತನಿಖೆ ನಡೆಯಲಿದೆ. ರಾಮಮಂಗಲಂ ಪಂಚಾಯತ್‌ನ ಒಂದು, ಎರಡನೆ ವಾರ್ಡ್‌ನಲ್ಲಿರುವವರ ಬೆರಳಚ್ಚುಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಎಡಿಜಿಪಿಯ ಉಪಸ್ಥಿತಿಯಲ್ಲಿ ಆಲುವದಲ್ಲಿ ತನಿಖೆ ಪ್ರಗತಿಯ ಮೇಲ್ನೋಟ ವಹಿಸಲಾಗುತ್ತಿದೆ. ರೂರಲ್ ಎಸ್ಪಿ ತನಿಖೆಯನ್ನು ಒಗ್ಗೂಡಿಸುವ ಡಿವೈಎಸ್ಪಿ ಜಿಜಿಮೋನ್ ಮತ್ತು ಇತರ ಅಧಿಕಾರಿಗಳು ಇಲ್ಲಿ ಭಾಗಹಿಸಿದ್ದಾರೆ. ಬಂಗಾಳಕ್ಕೆ ಪೊಲೀಸರ ತಂಡ ಕಳುಹಿಸಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಕುತ್ತಾ ಹೋದವರ ವಿವರಗಳು ಲಭಿಸಿಲ್ಲ ತಂಡ ಬಂಗಾಳದಲ್ಲಿಯೇ ಇದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News