×
Ad

ಪುತ್ತೂರು: ಗಾಳಿ ಮಳೆಗೆ ಮನೆಗೆ ಹಾನಿ

Update: 2016-05-18 17:31 IST

ಪುತ್ತೂರು: ಮಂಗಳವಾರ ರಾತ್ರಿ ಸುರಿದ ಮಳೆ ಗಾಳಿಗೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಗ್ರಾಪಂ ಸದಸ್ಯೆ ಭಾಗೀರಥಿ ಎಂಬವರ ಮನೆಯ ಸಿಮೆಂಟ್ ಶೀಟು ಸಂಪೂರ್ಣವಾಗಿ ಹಾರಿಹೋಗಿದ್ದು ಸುಮಾರು 20 ಸಾವಿರ ರೂ ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಬುಧವಾರ ಒಳಮೊಗ್ರು ಗ್ರಾಮದ ಗ್ರಾಮಕರಣಿಕ ಸುದೇಶ್ ರೈ ಬಳಜ್ಜ, ಕುಂಬ್ರ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಕ್ಯಕಾರ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಮತ್ತಿತರರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News