ಮಂಗಳೂರು: ಬುದ್ಧ ಜಯಂತಿ ಆಚರಣೆ
Update: 2016-05-18 19:04 IST
ಮಂಗಳೂರು,ಮೇ.21: ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾವು ಮೇ 21ರಂದು ಪೂರ್ವಾಹ್ನ 10 ಗಂಟೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಬುದ್ಧ ಜಯಂತಿಯನ್ನು ಆಯೋಜಿಸಿದೆ .
ಮೈಸೂರು ಸುಗತಪಾಲ ಭಂತೇಜಿ ಅವರು ಬುದ್ಧ ವಂದನೆ, ಮಹಾಮಂಗಳ ಸುತ್ತ ಪಠಣ ಹಾಗೂ ಲೋಕಶಾಂತಿಗೆ ಮೈತ್ರಿ ಧ್ಯಾನವನ್ನು ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸುವರು. ಬೌದ್ಧ ಸಾಂಸ್ಕೃತಿಕ ಆಚರಣೆ ಕುರಿತು ಮಂಗಳೂರು ವಿಶ್ವವಿದ್ಯಾಲಯದ ರಿಸರ್ಚ್ ಸ್ಕಾಲರ್ ರಘ ಧರ್ಮಸೇನ ಉಪನ್ಯಾಸ ನೀಡುವರು. ಅಪರಾಹ್ನ 2 ಗಂಟೆಗೆ ವಿದ್ಯಾರ್ಥಿವೇತನ, ಔಷಧ ಹಾಗೂ ಜೀವನಾವಶ್ಯಕ ಆಹಾರ ಯೋಜನೆಯ ಚೆಕ್ ವಿತರಣೆ ಮಾಡಲಾಗುವುದು. ಮಂಗಳೂರು ಜೈ ಭೀಮ್ ಕಲಾ ತಂಡದ ಮುಖಂಡ ಸಂಕಪ್ಪ ಕಾಂಚನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.