×
Ad

ಬಜಪೆ: ಹಿಫ್‌ಳುಲ್ ಕುರ್‌ಆನ್ ಕಾಲೇಜು ಮತ್ತು ನವೀಕೃತ ಮಸೀದಿ ಉದ್ಘಾಟನೆ

Update: 2016-05-18 19:19 IST

ಮಂಗಳೂರು,ಮೇ 18: ರಹ್ಮಾನಿಯ ಜುಮಾ ಮಸೀದಿಯ ನವೀಕೃತ ಕಟ್ಟಡ ಮತ್ತು ಹಿಫ್‌ಳುಲ್ ಕುರ್‌ಅನ್ ಕಾಲೇಜಿನ ಉದ್ಘಾಟನೆ ಇತ್ತೀಚೆಗೆ ನಡೆಯಿತು.
 ಅಸೈಯ್ಯದ್ ಕೆ.ಎಸ್.ಮುಖ್ತಾರ್ ತಂಙಳ್ ಕುಂಬೋಳ್ ಅವರು ಮಸೀದಿ ಉದ್ಘಾಟಿಸಿದರು.
  ಮಂಗಳೂರು ಖಾಝೀ ತ್ವಾಕ ಅಹ್ಮದ್ ಮುಸ್ಲಿಯಾರ್ ವಕ್ಫ್ ಕಾರ್ಯ ನಿರ್ವಹಿಸಿದರು.

 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಖಾಝಿ ಬೇಕಲ್ ಉಸ್ತಾದ್ ಅವರು ಪವಿತ್ರ ಕುರ್‌ಅನ್ ಕಂಠಪಾಠ ಮಾಡಿ ಅದರ ಭೋಧನೆಗಳನ್ನು ಬದುಕಿನಲ್ಲಿ ಅಳವಡಿಸಿದರೆ ಆತನ ಒಡಹುಟ್ಟಿದವರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವಷ್ಟು ಸ್ಥಾನವಿದೆ ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯಿದಿನ್ ಅವರು ಪವಿತ್ರ ಕುರ್‌ಆನ್ ಸಂಪೂರ್ಣ ಕಂಠ ಪಾಠ ಮಾಡುವಂತೆ ಇತರ ಯಾವುದೇ ಧರ್ಮಗ್ರಂಥಗಳನ್ನು ಕಂಠಪಾಠ ಮಾಡುವುದು ಕಂಡುಬರುತ್ತಿಲ್ಲ. ಕುರ್‌ಆನ್ ಹಾಫೀಝ್ ಸಮಾಧಿಸ್ಥನಾದರೂ ಮಣ್ಣು ಮುಟ್ಟದು ಎಂದು ಹೇಳಿದರು.
   ಹಿಫ್‌ಳುಲ್ ಕುರ್‌ಆನ್ ಕಾಲೇಜನ್ನು ತಾಜುಶ್ಯರೀಅ ಅಲಿ ಕುಂಙ ಉಸ್ತಾದ್ ಸಿರಿಯ ಉದ್ಘಾಟಿಸಿದರು. ಅಬ್ದುಲ್ ರಝಾಕ್ ಬಜಪೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಪ್ರಾಂಶುಪಾಲರಾದ ಹಾಫಿಳ್ ಶಾಹುಲ್ ಹಮೀದ್ ಕನ್ನಂಗಾರು, ಅಬ್ದುಲ್ಲ ಅಹ್ಸನಿ ಬಜಪೆ, ಹನೀಫ್ ಹಾಜಿ, ಬದ್ರುದ್ದೀನ್ ಹಾಜಿ, ಇಬ್ರಾಹೀಂ ಹಾಜಿ, ಮುಹಮ್ಮದ್ ರಫೀಕ್, ಅಬ್ದುಲ್ ಹಮೀದ್, ಸುಲೈಮಾನ್ ಸಖಾಫಿ, ಅಶ್ರಫ್ ಸಅದಿ, ರಫೀಕ್ ಮದನಿ ಉಪಸ್ಥಿತರಿದ್ದರು.ಝೈನುದ್ದೀನ್ ಸಅದಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News