ಇರಾದಲ್ಲಿ ಗಾಳಿ ಮಳೆಗೆ ಕುಸಿದುಬಿದ್ದಿರುವ ಕೋಳಿ ಪಾರಂ
Update: 2016-05-18 19:55 IST
ಕೊಣಾಜೆ: ಮಂಗಳವಾರದಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಮರಗಳು ಉರುಳಿ ಬಿದ್ದಿವೆ ಮಾತ್ರವಲ್ಲದೆ ಹಲವಾರು ಮನೆಗಳು, ಅಂಗಡಿಗಳು ಜಖಂಗೊಂಡಿವೆ. ಹಾನಿ ಸಂಭವಿಸಿದ ಪ್ರದೇಶಕ್ಕೆ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಹಾಗೂ ಗ್ರಾಮಕರಣಿಕ ಎ.ಪಿ.ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇರಾ ಗ್ರಾಮ ಸೇರಿದಂತೆ ಸಜಿಪ, ಚೇಳೂರು ಪ್ರದೇಶದಲ್ಲೂ ಮಳೆಗೆ ಹಾನಿ ಸಂಭವಿಸಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
T123