ಶ್ರೀಲಂಕಾ: ಭೀಕರ ಮಳೆ; ಭೂಕುಸಿತ ನೂರಾರು ಸಾವು
Update: 2016-05-18 21:03 IST
ಕೊಲಂಬೊ, ಮೇ 18: ಮಧ್ಯ ಶ್ರೀಲಂಕಾದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎರಡು ಸ್ಥಳಗಳಲ್ಲಿ ಭೂಕುಸಿತಗಳು ಸಂಭವಿಸಿದ್ದು, 150ಕ್ಕೂ ಅಧಿಕ ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ
ಪ್ರಕೃತಿಯ ರೌದ್ರಾವತಾರಕ್ಕೆ ಹೆದರಿ ಸುಮಾರು 2 ಲಕ್ಷ ಜನ ತಮ್ಮ ಮನೆಗಳನ್ನು ತೊರೆದಿದ್ದಾರೆ. 19 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಮೃತಪಟ್ಟವರ ಅಧಿಕೃತ ಸಂಖ್ಯೆ 35ಕ್ಕೇರಿದೆ.
ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಬುಧವಾರ ಮುಂಜಾನೆ ನಡೆಸಿದ ರಕ್ಷಣಾ ಕಾರ್ಯಾಚರಣೆಯ ವೇಳೆ 350ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೊಲಂಬೊದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮೂರು ಗ್ರಾಮಗಳು ಮಂಗಳವಾರ ತಡರಾತ್ರಿ ಭೂಕುಸಿತದಿಂದಾಗಿ ನೆಲದೊಳಗೆ ಸಮಾಧಿಯಾದವು.