ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್‌ನಿಂದ 3,45,493 ಕೋಟಿ ರೂ ಆರ್ಥಿಕ ವಹಿವಾಟು

Update: 2016-05-18 16:32 GMT

ಮಂಗಳೂರು.ಮೆ.18:ಕಾರ್ಪೊರೇಶನ್ ಬ್ಯಾಂಕು ಕಳೆದ ಮಾರ್ಚ್ 2016ರ ಅಂತ್ಯದಲ್ಲಿ 3,45,493 ಕೋಟಿ ರೂ ಆರ್ಥಿಕ ವಹಿವಾಟು ನಡೆಸಿದೆ ;ಈ ಬಾರಿ ಎನ್‌ಪಿಎ ಪ್ರಮಾಣ ಏರಿಕೆಯಾಗಿದ್ದು ಬ್ಯಾಂಕ್ 506 ಕೋಟಿ ನಷ್ಟ ಉಂಟಾಗಿದೆ ಎಂದು ಬ್ಯಾಂಕಿನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೈಕುಮಾರ್ ಗರ್ಗ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಾರ್ಪ್ ಬ್ಯಾಂಕ್ 2015ರ ಆರ್ಥಿಕ ವರ್ಷದಲ್ಲಿ 584 ಕೋಟಿ ನಿವ್ವಳ ಲಾಭ ಗಳಿಸಿತ್ತು ಈ ಸಂದರ್ಭದಲ್ಲಿ ನಿವ್ವಳ ಎನ್‌ಪಿಎ ಪ್ರಮಾಣವೂ ಶೇ 3.08ರಷ್ಟಿತ್ತು ಈ ಬಾರಿ ಈ ಪ್ರಮಾಣ 6.53ಕ್ಕೆ ಏರಿಕೆಯಾಗಿದೆ.ಸಾಲ ವಸೂಲಾತಿಯಿಂದಾಗಿರುವ ಹಿನ್ನಡೆಯಿಂದ ಮತ್ತು ಲಾಭಗಳಿಕೆಯಲ್ಲಿ ಇಳಿಮುಖವಾಗಲು ಒಂದು ಕಾರಣವಾಗಿದೆ ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.

ಕಾರ್ಪ್ ಬ್ಯಾಂಕ್ 2016ರ ವಿತ್ತೀಯ ವರ್ಷದಲ್ಲಿ ಠೇವಣಿ ಸಂಗ್ರಹದಲ್ಲಿ ಶೇ 2.92 ಹೆಚ್ಚಳವಾಗಿದ್ದು ಒಟ್ಟು 2,05,171 ಕೋಟಿ ರೂ ಠೇವಣಿ ಸಂಗ್ರಹಿಸಲಾಗಿದೆ.1,40,322 ಕೋಟಿ ರೂ ಸಾಲ ನೀಡಲಾಗಿದೆ.ಪ್ರಧಾನ ಮಂತ್ರಿ ಭಿಮಾ ಯೊಜನೆಯ ಪ್ರಕಾರ 12,20,522 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ.ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯ ಪ್ರಕಾರ 5,58,484 ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ.ಅಟಲ್ ಪೆನ್‌ಷನ್ ಯೋಜನೆಯ ಪ್ರಕಾರ 17,822 ಮಂದಿಯನ್ನು ಸೇರ್ಪಡೆಗೊಳಿ ಸಲಾಗಿದೆ.ಪ್ರಧಾಮ ಮಂತ್ರಿ ಜನಧನ್ ಯೋಜನೆಯ ಪ್ರಕಾರ 25.94ಲಕ್ಷ ಖಾತೆ ಆರಂಭಿಸಿ 741.46 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.ಬ್ಯಾಂಕ್‌ನ ಮೂಲಕ ಶೇ 98 ಖಾತೆದಾರರಿಗೆ ರೂಪೆ ಡೆಬಿಟ್ ಕಾರ್ಡ್ ನೀಡಲಾಗಿದೆ ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಜಿ.ಎಂ.ಆರ್.ನಾಗರಾಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News