ಮಹಿಳಾ ಸುರಕ್ಷೆಗೆ ಆದ್ಯತೆ : ಹೊಸ ಮಹಿಳಾ ನೀತಿ ಘೋಷಿಸಿದ ಮೇನಕಾ ಗಾಂಧಿ

Update: 2016-05-19 07:48 GMT

ಹೊಸದಿಲ್ಲಿ, ಮೇ 19: ಸಾರ್ವಜನಿಕರಂಗದಲ್ಲಿ ಮಹಿಳೆಗೆ ಸಮಾನ ನ್ಯಾಯ ವೊದಗಿಸಲಿಕ್ಕಾಗಿ ಕೇಂದ್ರ ಸರಕಾರ ಹೊಸ ಕಾನೂನು ರೂಪಿಸಲಿದ್ದು ಅದರ ಕರಡು ನೀತಿ ಸಿದ್ಧಪಡಿಸಿದೆ.. ಹೊಸ ಕರಡು ನೀತಿ ಪ್ರಕಾರ ಶಿಕ್ಷಣ, ಆರೋಗ್ಯ, ಉದ್ಯೋಗ, ವಾಣಿಜ್ಯ ಮುಂತಾದೆಲ್ಲ ಕ್ಷೇತ್ರಗಳಲ್ಲಿ ಮಹಿಳಾಪ್ರಾತಿನಿಧ್ಯ ಹೆಚ್ಚಿಸಲು ಮತ್ತು ಲಿಂಗ ಸಮಾನತೆ ಖಚಿತಗೊಳಿಸಲು ಉದ್ದೇಶಿಸಲಾಗಿದೆ. ಈ ಕುರಿತು ಮಾಹಿತಿಯನ್ನು ಕೇಂದ್ರ ಮಹಿಳಾಮತ್ತು ಶಿಶುಕಲ್ಯಾಣ ಸಚಿವೆ ಮೇನಕಾ ಗಾಂಧಿ ನೀಡಿದ್ದಾರೆ.

ಮಹಿಳಾ ತಾರತಮ್ಯ ಕೊನೆಗೊಳಿಸಲು ಪಠ್ಯಪುಸ್ತಕಗಳಲ್ಲಿ ಪರಿಷ್ಕರಣೆನಡೆಸಬೇಕಾಗಿದ್ದು ಇದಕ್ಕಾಗಿ ಶಾಲಾ ಮಟ್ಟದಲ್ಲಿಯೇ ಲಿಂಗ ಸಮಾನತೆಯ ಪ್ರಚಾರ ನಡೆಸಬೇಕೆಂದು ಹೊಸ ನೀತಿ ಶಿಫಾರಸು ಮಾಡಿದೆ. ಐದನೆ ತರಗತಿಯಿಂದ ಇದಕ್ಕಾಗಿ ಪ್ರಚಾರ ಯೋಜನೆಗಳನ್ನು ಆರಂಭಿಸಲಾಗುವುದು. ಶಾಲೆ, ಕಾಲೇಜು ಮಟ್ಟದಲ್ಲಿ ಸಮಾನತೆ ಖಚಿತ ಸಮಾನತೆ ಖಚಿತ ಪಡಿಸಲು, ದೌರ್ಜನ್ಯ ತಾರತಮ್ಯವನ್ನು ತಡೆಯಲು ವಿಶೇಷ ದೂರು ಸ್ವೀಕಾರ ವ್ಯವಸ್ಥೆ ಮಾಡಲಾಗುವುದು. ಹೆಮ್ಮಕ್ಕಳ ವಿದ್ಯಾಭ್ಯಾಸ ಖಚಿತ ಪಡಿಸಲು ವಿಶೇಷ ಸಾರಿಗೆ ವ್ಯವಸ್ಥೆಗೆ ಅನುಮತಿಸಬೇಕೆಂದು ಹೊಸ ನೀತಿ ಹೇಳಿದೆ.

ಮಹಿಳಾ ಸುರಕ್ಷೆಯನ್ನು ಖಚಿತ ಪಡಿಸುವ ಉದ್ದೇಶದೊಂದಿಗೆ ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವುದು. ಸುರಕ್ಷೆ ಬೆದರಿಕೆ ಇರುವ ಸಮಯದಲ್ಲಿ ಇದರ ವಿಶೇಷ ಪ್ಯಾನಿಕ್ ಬಟನ್ ಉಪಯೋಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವುದು. ಪೊಲೀಸ್ ಇಲಾಖೆಯಲ್ಲಿ ಮಹಿಳಾ ಮೀಸಲಾತಿ ಖಚಿತಗೊಳಿಸಿ ಮಹಿಳಾಪೊಲೀಸ್ ಸ್ವಯಂಸೇವಕರನ್ನು ನೇಮಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News