"No mosques" "Stop Islam"ಬೋರ್ಡ್ ಹಿಡಿದವರಿಗೆ ಸಹಬಾಳ್ವೆಯ ಪಾಠ ಕಲಿಸಿದ ಮುಸ್ಲಿಮ್ ಮಹಿಳೆ !
ಬ್ರಸ್ಸೆಲ್ಸ್ : ಹಿಜಬ್ ಧರಿಸಿದ 22 ವರ್ಷದ ಝಕಿಯಾ ಬೆಲ್ಖಿರಿಬೆಲ್ಜಿಯಂನಲ್ಲಿ ತಾನುಭಾಗವಹಿಸುತ್ತಿದ್ದ ಇಸ್ಲಾಮಿಕ್ ಲೈಫ್ ಸ್ಟೈಲ್ ಕಾರ್ಯಕ್ರಮದ ಸಭಾಂಗಣದ ಹೊರಗೆ ಬಲಪಂಥೀಯ ಇಸ್ಲಾಂ ವಿರೋಧಿ ಗುಂಪೊಂದು ಪ್ರತಿಭಟಿಸುವುದನ್ನುನೋಡಿದಾಕ್ಷಣ ಥೇಟ್ 21ನೇ ಶತಮಾನದ ಮಹಿಳೆಯಂತೆ ಪ್ರತಿಕ್ರಿಯೆ ನೀಡಿದಳು. ಅವಳ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ? ಆಕೆ ತಕ್ಷಣ ತನ್ನ ಫೊನ್ ತೆಗೆದುಬಲಪಂಥೀಯ ರಾಷ್ಟ್ರವಾದಿಗಳ ಗುಂಪು ಹಾಗೂ ತನ್ನ ಮುಸ್ಲಿಮ್-ವಿರೋಧಿ ಧೋರಣೆಗೆ ಹೆಸರಾಗಿರುವ ವ್ಲಾಮ್ಸ್ ಬೆಲಾಂಗ್ ಸಂಘಟನೆಯ ಸದಸ್ಯರೊಂದಿಗೆ ಹಲವು ಸೆಲ್ಫೀಗಳನ್ನು ಕ್ಲಿಕ್ಕಿಸಿದಳು. ಅವಳ ಈ ಸೆಲ್ಫೀಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿವೆ. ಈ ಸೆಲ್ಫೀಯ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಕಾಣುತ್ತಿದ್ದು ಅವಳ ಈ ಸೆಲ್ಫೀ ಪೋಸ್ ಹಲವರನ್ನು ಆಕರ್ಷಿಸಿವೆ.
‘‘ನಾವೆಲ್ಲರೂ ಸಹಬಾಳ್ವೆ ನಡೆಸಬಹುದು ಎಂದು ತೋರಿಸಲು ಹೀಗೆ ಮಾಡಿದೆ,’’ಎಂದು ಝಕಿಯಾ ತನ್ನನ್ನು ಸಂಪರ್ಕಿಸಿದ ಬಿಬಿಸಿ ವರದಿಗಾರರೊಬ್ಬರಿಗೆ ತಿಳಿಸಿದ್ದಾರೆ.
‘ನೋ ಹೆಡ್ ಸ್ಕಾರ್ಫ್’ ‘ನೋ ಮೋಸ್ಕ್ಸ್’ ಹಾಗೂ ‘ಸ್ಟಾಪ್ ಇಸ್ಲಾಂ’ ಎಂದು ಬರೆದಿರುವ ಪೋಸ್ಟರುಗಳನ್ನು ಪ್ರತಿಭಟನಾಕಾರರು ಕೈಯಲ್ಲಿ ಹಿಡಿದುಕೊಂಡಿರುವುದು ಝಕಿರಾ ಸೆಲ್ಫೀಗಳಿಂದ ಸ್ಪಷ್ಟವಾಗಿವೆ.
ಆಂಟ್ವರ್ಪ್ ಪಟ್ಟಣದಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ಇಸ್ಲಾಮಿಕ್ ಲೈಫ್ ಸ್ಟೈಲ್ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಬೆಲ್ಜಿಯಂ ನಗರದ 15% ಜನಸಂಖ್ಯೆ ಇಸ್ಲಾಂ ಧರ್ಮವನ್ನು ನಂಬಿದೆಯಾದರೂ ಇತ್ತೀಚೆಗೆ ಬ್ರಸ್ಸೆಲ್ಸ್ ವಿಮಾನ ನಿಲ್ದಾಣದಲ್ಲಿ ನಡೆದ ಉಗ್ರ ದಾಳಿಯಿಂದಾಗಿ ದೇಶದಲ್ಲಿ ಬಲಪಂಥೀಯ ಸಂಘಟನೆಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.
ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿನ ಪ್ರತಿಭಟನೆ ನೀರಸವೆನಿಸಿದ್ದರೂ ಝಕಿರಾ ಸೆಲ್ಫೀ ತೆಗೆಯಲು ಆರಂಭಿಸಿದಾಗಿನಿಂದ ಎಲ್ಲವೂ ಬದಲಾಯಿತು ಎಂದು ಹಲವರು ಹೇಳತ್ತಾರೆ
‘‘ಯಾವುದೇ ಪ್ರಚಾರ ಬಯಸದ ಯುವತಿಯಾಗಿರಲು ನಾನು ಬಯಸಿದ್ದೆ’’ಎಂದು ಹೇಳಿರುವ ಝಕಿರಾ ತನ್ನ ಸೆಲ್ಫೀಗಳು ಪ್ರತಿಭಟನೆಯ ದ್ಯೋತಕವಾಗಿರಲಿಲ್ಲ ಬದಲಾಗಿ ಸಂತಸ ಹಾಗೂ ಶಾಂತಿಯ ಸಂಕೇತ’’ಎಂದು ಹೇಳಿದ್ದಾಳೆ.