ಇದು ಕೋಮು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ವಿಜಯ : ಪಿಣರಾಯಿ ವಿಜಯನ್
Update: 2016-05-19 18:13 IST
ಕಣ್ಣೂರು, ಮೇ 19: ಕೋಮು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಜನಾದೇಶ ಇದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಜೊತೆಗೆ ಎಲ್‌ಡಿಎಫ್ ಮುಂದಿಟ್ಟ ಅಭಿವೃದ್ಧಿ ನೀತಿಗಳಿಗೆ ಜನರು ನೀಡಿದ ಅಂಗೀಕಾರ ಕೂಡಾ ಆಗಿದೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ. ಪ್ರತಿಯೊಂದೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರೇ ಇರಲಿಲ್ಲ. ಬೇರೆ ಕ್ಷೇತ್ರಗಳ ಅಭ್ಯರ್ಥಿಗೆ ವೋಟು ಮಾಡುವ ಪ್ರಯತ್ನ ನಡೆದಿತ್ತು. ಜನರು ಎಚ್ಚರ ವಹಿಸಿ ಮಧ್ಯಪ್ರವೇಶಿಸಿದ್ದರಿಂದ ಕೆಲವು ಈ ರೀತಿ ಮತದಾನ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪಿಣರಾಯಿ ಹೇಳಿದ್ದಾರೆಂದು ವರದಿಯಾಗಿದೆ.