×
Ad

ಮೇ 21ರಂದು 5ನೆ ಸನದುದಾನ ಕಾರ್ಯಕ್ರಮ

Update: 2016-05-19 22:19 IST

ಮಂಗಳೂರು, ಮೇ 19: ನಗರದ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಅಧೀನಕ್ಕೊಳಪಟ್ಟ ಜಲಾಲ್ ಮಸ್ತಾನ್ ಮುಹಮ್ಮದ್ ವೌಲಾ ಹಿಫ್ಲುಲ್ ಕುರ್‌ಆನ್ ಹಾಗೂ ಅರೆಬಿಕ್ ಕಾಲೇಜಿನ ಪ್ರಸ್ತುತ ಸಾಲಿನಲ್ಲಿ ಕುರ್‌ಆನ್ ಕಂಠಪಾಠ ಪೂರ್ತಿಗೊಳಿಸಿದ ಹಾಫಿಝ್ ವಿದ್ಯಾರ್ಥಿಗಳಿಗೆ 5ನೆ ಸನದುದಾನ ಕಾರ್ಯಕ್ರಮವು ಮೇ 21ರಂದು ಅಪರಾಹ್ನ 2:30ಕ್ಕೆ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಈ ಹಿಂದೆ ಹಿಪ್ಳುಲ್ ಕುರ್‌ಆನ್ ಪೂರ್ತಿಗೊಳಿಸಿದ 9 ವಿದ್ಯಾರ್ಥಿಗಳಿಗೆ ಹಾಗೂ ಎಸೆಸೆಲ್ಸಿ ಪರೀಕ್ಷೆಗೆ ನೇರವಾಗಿ ಹಾಜರಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ದುಆದೊಂದಿಗೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ವೈ.ಅಬ್ದುಲ್ಲಾ ಕುಂಞಿ ವಹಿಸಲಿದ್ದಾರೆ. ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಸೀದಿಯ ಟ್ರಸ್ಟಿ ಹಾಜಿ ಸೈಯದ್ ಅಹ್ಮದ್ ಬಾಷ ತಂಙಳ್, ಮಸೀದಿಯ ಖತೀಬ್ ವಿ.ಕೆ.ಸದಖತುಲ್ಲಾಹ್ ಫೈಝಿ, ಉಸ್ತಾದ್ ಮುಹಮ್ಮದ್ ಅಮೀನ್ ಹುದವಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News