ಬೈಕ್‌ಗಳ ಢಿಕ್ಕಿ: ಓರ್ವ ಮೃತ್ಯು
Update: 2016-05-19 23:36 IST
ಮಣಿಪಾಲ, ಮೇ 19: ಎರಡು ಮೋಟಾರು ಸೈಕಲ್‌ಗಳು ಢಿಕ್ಕಿ ಹೊಡೆದ ಪರಿಣಾಮ ಒಂದು ಬೈಕ್‌ನ ಸವಾರ ಮೃತಪಟ್ಟು, ಮತ್ತೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಣಿಪಾಲದ ಎಂಐಟಿ ಬಳಿ ರಾತ್ರಿ 11 ಗಂಟೆಗೆ ನಡೆದಿದೆ.
ಮೃತ ಬೈಕ್ ಸವಾರರನ್ನು ಧೀರೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಇವರು ಮಣಿಪಾಲ ಟೈಗರ್ ಸರ್ಕಲ್ ಕಡೆಯಿಂದ ಈಶ್ವರನಗರದತ್ತ ಸಾಗುತ್ತಿದ್ದು, ಎಂಐಟಿನಿಂದ ವ್ಯಾಲಿವ್ಯೆನತ್ತ ಬರುತ್ತಿದ್ದ ಹಝರತ್ ಬಿಲಾಲ್ ಹಕೀಮ್, ಅಜಾಗರೂಕತೆ ಹಾಗೂ ವೇಗವಾಗಿ ಬಂದು ಅದಕ್ಕೆ ಢಿಕ್ಕಿ ಹೊಡೆದಿದ್ದು, ಪಟೇಲ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.