ವಿದ್ಯುತ್ ಆಘಾತದಿಂದ ಸಾವು
Update: 2016-05-19 23:36 IST
ಕೋಟ, ಮೇ 19: ಮನೆಯ ಟೆರೇಸ್ ಮೇಲಿನ ಕೇಬಲ್ ವಯರ್‌ನ್ನು ಒದ್ದೆ ಕೈಯಲ್ಲಿ ಹಿಡಿದ ಪರಿಣಾಮ ವಿದ್ಯುತ್ ಶಾಕ್ ತಗಲಿ ವೃದ್ಧರೊಬ್ಬರು ಮೃತಪಟ್ಟ ಘಟನೆ ನಿನ್ನೆ ಅಪರಾಹ್ನ ಐರೋಡಿ ಗ್ರಾಮದಿಂದ ವರದಿಯಾಗಿದೆ.
ಐರೋಡಿ ಗ್ರಾಮದ ಅಲ್ಸೆಬೆಟ್ಟು ಎಂಬಲ್ಲಿ ಮಾರ್ಕ್ ಆಳ್ವ (70) ಅವರು ಮನೆಯ ಟೆರೇಸ್ ಮೇಲೆ ಮಳೆಯಿಂದ ಒದ್ದೆಯಾದ ಕಸವನ್ನು ತೆಗೆದು ಸ್ವಚ್ಛ ಮಾಡುತ್ತಿದ್ದಾಗ ತನ್ನ ಒದ್ದೆ ಕೈಯಲ್ಲಿ ಕೇಬಲ್ ವಯರ್‌ನ್ನು ಹಿಡಿದಿದ್ದು, ಇದರಿಂದ ವಿದ್ಯುತ್ ಶಾಕ್ ತಗಲಿ ನಿಸ್ತೇಜರಾಗಿ ಬಿದ್ದರು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.