×
Ad

ಪ್ರಾಮಾಣಿಕತೆ ಮೆರೆದ ಎಟಿಎಂ ಗ್ರಾಹಕ

Update: 2016-05-19 23:38 IST

ಪಡುಬಿದ್ರೆ, ಮೇ 19: ಪಡುಬಿದ್ರೆಯಲ್ಲಿ ರುವ ಕೆನರಾ ಬ್ಯಾಂಕ್‌ನಲ್ಲಿ ಎಟಿಎಂನಲ್ಲಿ ಹಣ ಪಡೆಯಲು ಬಂದಿದ್ದ ಗ್ರಾಹಕನಿಗೆ ಇನ್ನೊಬ್ಬ ಗ್ರಾಹಕರ ಹಣ ಬಂದಿದ್ದು, ಅದನ್ನು ಬ್ಯಾಂಕ್‌ಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.
 
ಪಡುಬಿದ್ರೆ ಕೆನರಾ ಬ್ಯಾಂಕ್‌ನ ಎಟಿಎಂನಿಂದ ಬುಧವಾರ ರಾತ್ರಿಯ 7:35ಕ್ಕೆ ಗ್ರಾಹಕರೋರ್ವರು 1000ರೂ. ಡ್ರಾ ಮಾಡಿದ್ದರೂ ಹಣ ಬಂದಿರಲಿಲ್ಲ. ಹಣ ಬಾರದ ಹಿನ್ನೆಲೆಯಲ್ಲಿ ಆ ಗ್ರಾಹಕ ವಾಪಸ್ ತೆರಳಿದ್ದ. ಅವರು ತೆರಳಿದ ಬಳಿಕ ಬೆಂಗಳೂರಿನಿಂದ ಬಂದಿದ್ದ ವೈ. ಎಚ್. ಸುಬ್ರಹ್ಮಣ್ಯ ಇದೇ ಎಟಿಎಂಗೆ ಬಂದಿದ್ದು, ಮೊದಲ ಗ್ರಾಹಕನ ಹಣ ಮತ್ತು ವರದಿಯುಳ್ಳ ಚೀಟಿ ಬಂದಿತ್ತು.

ಈ ಹಣ ನನಗೆ ಸಂಬಂಧಿಸಿದಲ್ಲ ಎಂದು ಹಣವನ್ನು ಪತ್ರಕರ್ತ ರಾಮಚಂದ್ರ ಆಚಾರ್ಯರ ಮೂಲಕ ಕೆನರಾ ಬ್ಯಾಂಕ್ ಪಡುಬಿದ್ರೆ ಶಾಖೆಯ ಪ್ರಬಂಧಕರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ನಿಧಾನಗತಿಯ ತಾಂತ್ರಿಕ ಕಾರಣ ಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ. ಹಣ ಸಿಗದೆ ಇದ್ದ ಖಾತೆಯ ಗ್ರಾಹಕ ಪಡುಬಿದ್ರೆ ಕೆನರಾ ಬ್ಯಾಂಕ್ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News