ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ- ಉಮೇಶ ಮುಂಡಳ್ಳಿ
ಭಟ್ಕಳ, ಮೇ 20: ಸಾಮಾಜಿಕ ಪರಿಶೋಧನೆಯಿಂದ ಇಂದು ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ್ ಕಡೆಗೆ ಮುಖಮಾಡುವಂತಾಗಿದೆ. ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯಎಂದು ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕ ಉಮೇಶ ಮುಂಡಳ್ಳಿ ಹೇಳಿದರು.
ಅವರು ಗುರುವಾರ ಗ್ರಾಮ ಪಂಚಾಯತ್ ಕೊಪ್ಪದಲ್ಲಿ ನಡೆದ 2016-17ನೇ ಸಾಲಿನ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಾತ್ಮಾಗಾಂಧಿ ನರೇಗಾಯೋಜನೆ ಕೂಲುಕಾರರು ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯುವ ಸಾಮಾಜಿಕ ಪರಿಶೋಧನೆ ಯೋಜನೆಯಲ್ಲಿನ ಫಲಾನುಭವಿಗಳಿಗೆ ಕೂಲಿಕಾರರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಒಂದು ವರದಾನವಿದ್ದಂತೆ ಎಂದರೂ. ಈ ಸಂದರ್ಭದಲ್ಲಿ ಪಂಚಾಯತ್ ನಲ್ಲಿ ನಡೆದ ಉತ್ತಮ ಕಾಮಗಾರಿಗಳು ಮತ್ತು ಕಂಡುಬಂದ ನ್ಯೂನ್ಯತೆಗಳನ್ನು ಸಭೆಯಲ್ಲಿ ಓದಿ ಹೇಳಲಾಯಿತು.
ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ಅಧಿಕಾರಿ ಜಿ.ಎನ್.ನಾಯ್ಕ ಮಾತನಾಡಿ ನರೆಗಾಯೋಜನೆ ಸಾಮಾಜಿಕ ಕಳಕಳಿಯ ಯೋಜನೆಯಾಗಿದ್ದು ಇಲ್ಲಿರುವ ಅನೇಕ ಸೌಲಭ್ಯಗಳು ಬೇರೆ ಯೋಜನೆಗಳಲ್ಲಿ ಇಲ್ಲಾ. ಮತ್ತು ಸಾಮಾಜಿಕ ಪರಿಶೋಧನೆಯಲ್ಲಿ ಗುರುತಿಸಿದ ನ್ಯೂನ್ಯತೆಗಳು ಮತ್ತೆ ಮತ್ತೆ ಮರುಕಳಿಸದಮತೆ ಅನುಪಾಲನೆ ಮಾಡುವಮತೆ ತಿಳಿಸಿದರು.ಪಂಚಾಯತ್ ಕಾರ್ಯದರ್ಶಿ ಎಂ.ಎ.ಗೌಡ ಮೊದಲಿಗೆ ಸ್ವಾಗತಿಸಿ ಹಿಂದಿನ ಸಭೆಯ ನಡಾವಳಿ ಸಭೆಯ ಗಮನಕ್ಕೆ ತಂದರು ಮತ್ತು ಕೊನೆಯಲ್ಲಿ ವಂದಿಸಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ನಾಗೇಶ ನಾಯ್ಕ, ಸದಸ್ಯರಾದ ಶೇಖರ ನಾಯ್ಕ, ರಾಮಗೊಂಡ, ಸೋಮಯ್ಯಗೊಂಡ, ಲಕ್ಷ್ಮೀ ಮೊಗೇರ, ಗಣಪತಿ ಮರಾಠಿ ಮತ್ತಿತರರು ಉಪಸ್ಥಿತರಿದ್ದರು. ಕೂಲಿಕಾರರು ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.