×
Ad

ತ.ನಾ.ಮುಖ್ಯಮಂತ್ರಿಯಾಗಿ ಸೋಮವಾರ ಜಯಲಲಿತಾ ಪ್ರಮಾಣ ವಚನ ಸ್ವೀಕಾರ

Update: 2016-05-20 20:50 IST

ಚೆನ್ನೈ,ಮೇ 20: ಎಡಿಎಂಕೆ ಅಧಿನಾಯಕಿ ಜೆ.ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶನಿವಾರ ಸಂಜೆ ಇಲ್ಲಿ ಸಭೆ ಸೇರಿದ ನೂತನ ಎಡಿಎಂಕೆ ಶಾಸಕರು ಜಯಲಲಿತಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.

32 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸತತವಾಗಿ ಎರಡನೇ ಅವಧಿಗೆ ಮುಖ್ಯಮಂತ್ರಿ ಗಾದಿಯನ್ನೇರುತ್ತಿರುವ ಹೆಗ್ಗಳಿಕೆಗೆ ಜಯಲಲಿತಾ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News