ನಾಳೆಯಿಂದ ವೈದ್ಯಕೀಯ ಶಿಬಿರ
Update: 2016-05-20 23:39 IST
ಪುತ್ತೂರು, ಮೇ 20: ಇಲ್ಲಿನ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಮೇ 22ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮತ್ತು ವಿಟ್ಲದ ಮಂಗಳಮಂಟಪದಲ್ಲಿ ಹಾಗೂ ಮೇ 29ರಂದು ಸುಳ್ಯದ ಕಾಯರ್ತ್ತೋಡಿ ದೇವಸ್ಥಾನದ ವಠಾರದಲ್ಲಿ ಉಚಿತವೈದ್ಯ ಕೀಯ ಶಿಬಿರ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ವಸಂತ ಎ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ನಿರ್ದೇಶಕ ಪದ್ಮನಾಭ ಬೋರ್ಕರ್, ಭಾಸ್ಕರ, ದೇವಪ್ಪಮತ್ತು ಮೋಹನ್ ಹೆಗ್ಡೆ ಉಪಸ್ಥಿತರಿದ್ದರು.