×
Ad

ನಿಂದನೆ: ದೇವಳದ ಅರ್ಚಕರ ವಿರುದ್ಧ ದೂರು

Update: 2016-05-20 23:40 IST

ಕಾಪು, ಮೇ 20: ಉದ್ಯಾವರದ ಸಿದ್ಧಿ ವಿನಾಯಕ ದೇವಾಲಯದಲ್ಲಿ ಭಕ್ತಾದಿಗಳಿಗೆ ನಿಂದನೆ ಮಾಡಿರುವ ಅರ್ಚಕರ ವಿರುದ್ಧ ಜಿಲ್ಲಾಕಾರಿಗೆ ದೂರು ನೀಡಲಾಗಿದೆ.
ಉದ್ಯಾವರ ಗ್ರಾಪಂ ಸದಸ್ಯ ದಿವಾಕರ ಬೊಳ್ಜೆ ತನ್ನ ಪತ್ನಿ ಮತ್ತು ಮಗು ಜೊತೆ ಮೇ 18ರಂದು ಸಂಜೆ 6:30ಕ್ಕೆ ಉದ್ಯಾವರದ ಸಿದ್ಧ್ದಿ ವಿನಾಯಕ ದೇವಾಲಯಕ್ಕೆ ದೇವರ ದರ್ಶನಕ್ಕೆಂದು ಹೋಗಿದ್ದರು. ಈ ವೇಳೆ ಪತ್ನಿ ಮತ್ತು ಮಗು ದೇವಳದ ಆವರಣದಲ್ಲಿರುವಾಗ ಅರ್ಚಕ ರಂಗನಾಥ ಭಟ್ ಅವ್ಯಾಚ್ಯ ಶಬ್ದ್ಧಗಳಿಂದ ಬೈದು ನಿಂದಿಸಿ ದೇವಾಲಯದ ಆವರಣದಿಂದ ಹೊರಗೆ ದಬ್ಬಿದ್ದಾರೆ ಎಂದು ದಿವಾಕರ ಬೊಳ್ಜೆ ಜಿಲ್ಲಾಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ ಅರ್ಚಕ ರಂಗನಾಥ ಭಟ್ ವಿರುದ್ಧ ಕ್ರಮ ಜರಗಿಸುವಂತೆ ಅವರು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News