×
Ad

ರಿಕ್ಷಾ ಚಾಲಕರ ವರ್ತನೆಯಲ್ಲಿ ಬದಲಾವಣೆ ಅಗತ್ಯ: ಎಸ್ಪಿ

Update: 2016-05-20 23:44 IST

ಮಣಿಪಾಲ, ಮೇ 20: ರಿಕ್ಷಾ ಚಾಲ ಕರ ಸೇವೆ ಈ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಆದುದರಿಂದ ಚಾಲ ಕರು ಪ್ರಯಾಣಿಕರೊಂದಿಗೆ ಒರ ಟಾಗಿ ವರ್ತಿಸದೆ ಸಭ್ಯತೆಯಿಂದ ನಡೆ ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಚಾಲಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.
ಮಣಿಪಾಲ ವಿವಿ, ಉಡುಪಿ ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಕಚೇರಿ, ಮಣಿಪಾಲ ಆಟೊ ರಿಕ್ಷಾ ಯೂನಿಯನ್‌ನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮಣಿಪಾಲದ ಇಂಟರ್ಯಾಕ್ಟ್ ಲೆಕ್ಚರ್ ಹಾಲ್‌ನಲ್ಲಿ ಆಯೋಜಿಸಲಾದ ರಿಕ್ಷಾ ಚಾಲಕ -ಮಾಲಕ ರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪೊಲೀಸ್ ಸುರಕ್ಷಾ ಮೊಬೈಲ್ ಆ್ಯಪ್‌ಗೆ ಮಣಿಪಾಲ ರಿಕ್ಷಾ ಚಾಲಕರ ವಿರುದ್ಧ ವಿದ್ಯಾರ್ಥಿಗಳಿಂದ ತಿಂಗಳಿಗೆ 10 ದೂರುಗಳು ಬರುತ್ತಿವೆ. ಚಾಲಕರ ಒರಟುತನ, ರಾತ್ರಿ ವೇಳೆ ಹೆಚ್ಚಿನ ಹಣ ಪಡೆದುಕೊಳ್ಳುವುದು ಮತ್ತು ಚಾಲಕರು ಗುಂಪು ಸೇರಿ ಬಲಾತ್ಕಾರವಾಗಿ ಬಾಡಿಗೆ ಕರೆದುಕೊಂಡು ಹೋಗುವುದು ಮುಖ್ಯ ದೂರುಗಳಾಗಿವೆ ಎಂದರು.
ಕಾರ್ಯಕ್ರಮವನ್ನು ಮಣಿಪಾಲ ವಿವಿಯ ರಿಜಿಸ್ಟ್ರಾರ್ ಡಾ. ನಾರಾಯಣ ಸಭಹಿತ್ ಉದ್ಘಾಟಿಸಿದರು. ಮಣಿಪಾಲ ಪ್ರಾದೇಶಿಕ ಅಭಿವೃದ್ಧಿ ಕೇಂದ್ರದ ಸಂಯೋಜಕ ಡಾ.ಕೆ.ವಿ.ಎಂ.ವಾರಂಬಳ್ಳಿ, ಆರ್‌ಟಿಒ ಕಚೇರಿಯ ಮೋಟಾರು ನಿರೀಕ್ಷಕ ವಿಶ್ವನಾಥ್ ನಾಯಕ್, ಮಣಿಪಾಲ ಕ್ಲಿನಿಕಲ್ ಸೈಕೋಲಜಿಯ ಅಸೋಸಿಯೇಟ್ ಪ್ರೊ.ಡಾ.ಸಹನಾ ಮಧ್ಯಸ್ಥ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ಸ್ವಾಗತಿಸಿದರು. ರಿಕ್ಷಾ ಯೂನಿ ಯನ್‌ನ ಗೌರವಾಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು. ಮಣಿಪಾಲ ವಿವಿಯ ಜೈವಿಠಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News