×
Ad

ಕಾಂಗ್ರೆಸ್‌ಗೆ ‘ಮೇಜರ್ ಸರ್ಜರಿ’ ಅಗತ್ಯ: ದಿಗ್ವಿಜಯ್

Update: 2016-05-20 23:54 IST

ಹೊಸದಿಲ್ಲಿ, ಮೇ 20: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಪಕ್ಷಕ್ಕೆ ‘ಮೇಜರ್ ಸರ್ಜರಿ’ ಮಾಡಬೇಕೆಂದು ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಒತ್ತಿ ಹೇಳಿದ್ದಾರೆ. ಕಾಂಗ್ರೆಸ್ ಅಸ್ಸಾಂ ಹಾಗೂ ಕೇರಳಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ತಮಿಳುನಾಡಿನಲ್ಲಿ ಡಿಎಂಕೆಯೊಂದಿಗಿನ ಮೈತ್ರಿ ಕೆಲಸಕ್ಕೆ ಬರಲಿಲ್ಲ.
ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಲಾಗುವುದು ಹಾಗೂ ಜನತೆಯ ಸೇವೆಗಾಗಿ ‘ಹೆಚ್ಚು ಶಕ್ತಿಯಿಂದ’ ಕೆಲಸ ಮಾಡಲಾಗುವುದೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ನೀಡಿದ ಮರುದಿನವೇ ದಿಗ್ವಿಜಯ್ ಸಿಂಗರ ಈ ಆಗ್ರಹ ಹೊರ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News