×
Ad

ಪಿಣರಾಯಿ ವಿಜಯನ್‌ರಿಂದ ವಿ.ಎಸ್. ಅಚ್ಯುತಾನಂದನ್‌ರ ದಿಢೀರ್ ಭೇಟಿ!

Update: 2016-05-21 12:27 IST

 ತಿರುವನಂತಪುರಂ, ಮೇ 21: ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಟನ್ಮೆಂಟ್ ಹೌಸ್‌ಗೆ ತೆರಳಿ ವಿ.ಎಸ್. ಅಚ್ಯುತಾನಂದನ್‌ರನ್ನು ಭೇಟಿಯಾಗಿದ್ದಾರೆ. ಬೆಳಗ್ಗೆ 9.40ಕ್ಕೆ ವಿ.ಎಸ್‌ರನ್ನು ಭೇಟಿಯಾಗಲು ತೆರಳಿದಾಗ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಜೊತೆಯಲ್ಲಿದ್ದರು.

  ವಿಎಸ್ ಅಚ್ಯುತಾನಂದನ್ ಮತ್ತು ಪಿಣರಾಯಿ ನಡುವೆ ಕೇವಲ ಐದು ನಿಮಿಷ ಮಾತುಕತೆ ನಡೆಯಿತು. ಇಂದು ಹನ್ನೊಂದು ಗಂಟೆಗೆ ವಿಎಸ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇದಕ್ಕೂ ಮೊದಲು ಪಿಣರಾಯಿ ವಿಜಯನ್ ವಿಎಸ್‌ರನ್ನು ದಿಢೀರ್ ಭೇಟಿ ಆಗಿದ್ದಾರೆ.

 ನಮ್ಮಲ್ಲಿ ಅತಿ ಕೊನೆಯ ಮುಖ್ಯಮಂತ್ರಿ ವಿಎಸ್ ಆಗಿದ್ದು ಅವರಿಗೆ ಅತಿಹೆಚ್ಚು ಅನುಭವವಿದೆ. ಆದ್ದರಿಂದ ಅವರಿಂದ ಮಾಹಿತಿ ಪಡೆಯುವುದು ಭೇಟಿಯ ಉದ್ದೇಶವಾಗಿತ್ತು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿಎಸ್‌ರಿಂದ ಹಲವು ವಿಚಾರಗಳನ್ನುಕಲಿಯಲಿಕ್ಕಿದೆ ತಾನೋರ್ವ ಹೊಸಮುಖ ಆಗಿದ್ದೇನೆ ಎಂದು ಹೇಳಬಹುದಾದ ವ್ಯಕ್ತಿ.ವಿಎಸ್‌ರಿಂದ ಮಾಹಿತಿ ಪಡೆಯುವುದು ಆಡಳಿತ ನಡೆಸುವ ನಿಟ್ಟಿನಲ್ಲಿ ಪ್ರಧಾನವಾಗಿದೆ ಎಂದು ವಿಎಸ್‌ರನ್ನು ಭೇಟಿಯಾದ ಬಳಿಕ ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News