×
Ad

ಕೇರಳ: ಐಪಿಎಸ್ ಅಧಿಕಾರಿ ಮೆರಿಲ್ ಜೋಸ್ ನಕಲಿ ಫೇಸ್‌ಬುಕ್‌ನಲ್ಲಿ ಮೀಸಲಾತಿ ವಿರೋಧಿ ಪೋಸ್ಟ್ ಪ್ರತ್ಯಕ್ಷ!

Update: 2016-05-21 14:00 IST

ಕೊಚ್ಚಿ,ಮೇ 21: ತನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಪೇಜ್ ತಯಾರಿಸಿ ಮೀಸಲಾತಿ ವಿರೋಧಿ ಪೋಸ್ಟ್ ಹಾಕಲಾಗಿದೆ ಎಂದು ಮೆರಿಲ್ ಜೊಸ್ ಐಪಿಎಸ್ ಹೇಳಿದ್ದಾರೆ. ಮೀಸಲಾತಿ ವಿರೋಧಿ ಪೋಸ್ಟ್ ಪ್ರತ್ಯಕ್ಷವಾದ ಫೇಸ್‌ಬುಕ್ ಪೇಜ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮೆರಿಲ್ ಜೋಸ್ ಹೇಳಿದ್ದಾರೆ. ತನ್ನ ಒರಿಜಿನಲ್ ಪ್ರೋಫೈಲ್‌ನ್ನು ಅವರು ತೋರಿಸಿದ್ದಾರೆ.

ತನ್ನ ಪೇಜ್ ಎಂದು ನಕಲಿ ಪೇಜ್‌ನ್ನು ಭಾವಿಸಿ ಪ್ರತಿಕ್ರಿಯಿಸಿ ಮೋಸ ಹೋಗಬೇಡಿ ಎಂದು ವಿನಂತಿಸಿದ ಅವರು ಇಂತಹ ಪೇಜ್‌ಗಳ ಪೋಸ್ಟ್‌ಗಳನ್ನು ನಂಬಬಾರದು. ಅದರಲ್ಲಿ ಪೋಸ್ಟ್ ಮಾಡಿದ ವಿಷಯಗಳ ಕುರಿತು ಶೇರ್ ಮಾಡುವವರು ಗಮನಿಸಬೇಕು ಎಂದು ಮೆರಿಲ್ ಜೋಸೆಫ್ ನೆನಪಿಸಿದ್ದಾರೆ. ಈ ಫೇಸ್‌ಬುಕ್ ಪೇಜ್ ವಿರುದ್ಧ ಮೆರಿಲ್ ದೂರು ನೀಡಲಿದ್ದಾರೆಂದು ಹೇಳಿದ್ದಾರೆ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಒಂದನೆ ರ್ಯಾಂಕ್ ಗಳಿಸಿದ ಟೀನಾ ದಾಬಿ ಮತ್ತು ಇನ್ನೋರ್ವ ಅಂಕಿತ್ ಶ್ರೀವಾಸ್ತವರ ಮಾರ್ಕ್‌ಗಳನ್ನು ಹೋಲಿಕೆ ಮಾಡಿ ಮೆರಿಲ್ ಜೋಸೆಫ್‌ರ ನಕಲಿ ಫೇಸ್‌ಬುಕ್‌ನಲ್ಲಿ ಮೀಸಲಾತಿ ವಿರೋಧಿ ಪೋಸ್ಟ್‌ಗಳನ್ನು ಕಿಡಿಗೇಡಿಗಳು ಹಾಕಿದ್ದಾರೆ. ಇದು ಸುದ್ದಿಯಾದ ನಂತರ ಮೆರಿಲ್ ಸ್ಪಷ್ಟೀಕರಣವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News