×
Ad

ನನ್ನ ಮದುವೆಯ ವಿಷಯ ಟ್ವೀಟರ್‌ನಲ್ಲಿ ತಿಳಿಸುವೆ: ಸಲ್ಮಾನ್ ಖಾನ್

Update: 2016-05-21 14:11 IST

ಮುಂಬೈ, ಮೇ 21: ನಾನು ಮದುವೆಯಾಗುವ ಯೋಜನೆಯಿದ್ದರೆ ಅದನ್ನು ಟ್ವೀಟರ್ ಇಲ್ಲವೇ ಫೇಸ್‌ಬುಕ್‌ನ ಮೂಲಕ ತನ್ನ ಅಭಿಮಾನಿಗಳಿಗೆ ತಿಳಿಸುವೆ ಎಂದು ಸೂಪರ್ ಸ್ಟಾರ್ ಸಲ್ಮಾನ್‌ಖಾನ್ ಸ್ಪಷ್ಟಪಡಿಸಿದ್ದಾರೆ.

ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಹಾಗೂ ಅವರ ತಂದೆ ಸಲೀಮ್ ಖಾನ್ ಗುರುವಾರ ರಾತ್ರಿ ರೆಸ್ಟೊರೆಂಟ್‌ನಿಂದ ಹೊರಬರುತ್ತಿದ್ದಾಗ ಅವರ ಮೇಲೆ ಮುಗಿಬಿದ್ದ ಮಾಧ್ಯಮಗಳು ಸಲ್ಮಾನ್ ಮದುವೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಗರೆದಿದ್ದವು. ಇದರಿಂದ ಕೆರಳಿದ ಸೊಹೈಲ್, ಪತ್ರಕರ್ತರನ್ನು ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಸಲ್ಮಾನ್ ತನ್ನ ಮದುವೆಯ ಬಗ್ಗೆ ತಾನೇ ಸಾಮಾಜಿಕ ತಾಣಗಳಲ್ಲಿ ಘೋಷಿಸುವೆ ಎಂದು ಹೇಳಿಕೆ ನೀಡಿದ್ದಾರೆ.

 ಈ ವರ್ಷದ ಐಐಎಫ್‌ಎ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್‌ರಲ್ಲಿ ಸಹೋದರ ಸೊಹೈಲ್ ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಕೇಳಿದಾಗ, ಸೊಹೈಲ್ ಕೆಟ್ಟದಾಗಿ ವರ್ತಿಸಿರಲಿಲ್ಲ. ರಾತ್ರಿ 12 ಗಂಟೆಗೆ, ನನ್ನ ತಂದೆಯ ಹತ್ತಿರ ನೀವೆಲ್ಲರೂ ನನ್ನ ಮದುವೆಯ ಬಗ್ಗೆ ವಿಚಾರಿಸಿದ್ದೀರಿ. 80ರ ಹರೆಯದ ನನ್ನ ತಂದೆಯ ಬಾಯಿಗೆ ಮೈಕ್ ಹಾಗೂ ಕ್ಯಾಮರಾ ಹಿಡಿದಿದ್ದೀರಿ. ನಿಮ್ಮ ಈ ವರ್ತನೆ ಸರಿಯೇ? ಎಂದು ಸಲ್ಮಾನ್ ಪ್ರಶ್ನಿಸಿದ್ದಾರೆ.

ಸಲ್ಮಾನ್ ಖಾನ್ ರೊಮಾನಿಯದ ಸುದ್ದಿ ನಿರೂಪಕಿ ಲೂಲಿಯಾ ಅವರೊಂದಿಗೆ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿ ಹರಡಿದೆ. ಪ್ರೀತಿ ಝಿಂಟಾರ ಮದುವೆಯ ಆರಕ್ಷತೆಗೆ ಸಲ್ಮಾನ್-ಲೂಲಿಯಾ ಭಾಗವಹಿಸಿದ ಬಳಿಕ ಈ ವದಂತಿಗೆ ಮತ್ತಷ್ಟು ಪುಷ್ಟಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News