ಆರ್‌ಟಿಇ: ತಿದ್ದುಪಡಿಗೆ 23ರವರೆಗೆ ಅವಕಾಶ
Update: 2016-05-21 15:02 IST
ಸುಳ್ಯ, ಮೇ 21: 2016-17 ನೇ ಸಾಲಿಗೆ ಆರ್.ಟಿ.ಇ ಸೀಟಿಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ಇರುವ ಲೋಪದೋಷಗಳನ್ನು ತಿದ್ದುಪಡಿ ಮಾಡಲು ಆನ್ ಲ್ಯನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದ ಸೀಟು ಹಂಚಿಕೆ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗದ ಹಾಗೂ ಆಯ್ಕೆಯಾಗಿದ್ದರೂ ನೆರೆಹೊರೆ ವ್ಯಾಪ್ತಿಯ ದಾಖಲೆ ಸಲ್ಲಿಸಲು ವಿಫಲರಾಗಿರುವ ಪೋಷಕರು 2ನೇ ಹಂತದ ಲಾಟರಿ ಆಯ್ಕೆ ಪ್ರಕ್ರಿಯೆಗೆ ಮತ್ತೊಮ್ಮೆ ಅವಕಾಶ ಪಡೆಯಲು ಆನ್‌ಲೈನ್ ತಂತ್ರಾಂಶದಲ್ಲಿ ಅರ್ಜಿಗಳ ಮಾಹಿತಿಯನ್ನು ಪರಿಷ್ಕರಿಸಬೇಕಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಪೂಷಕರು ಇದನ್ನು ಗಮನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.