ಏರ್ ಇಂಡಿಯಾದಿಂದ ಸೂಪರ್ ಸೇಲ್ ಯೋಜನೆ
Update: 2016-05-21 16:59 IST
ನವದೆಹಲಿ :ಹಲವಾರು ಖಾಸಗಿ ಬಜೆಟ್ ಏರ್ ಲೈನ್ ಸಂಸ್ಥೆಗಳು ಕಡಿಮೆ ಪ್ರಯಾಣ ದರಗಳನ್ನು ಘೋಷಿಸಿದ ಬೆನ್ನಲ್ಲೇ ಏರ್ ಇಂಡಿಯಾ ಕೂಡ ತಾನು ಅವರಿಗೇನು ಕಡಿಮೆಯಿಲ್ಲವೆಂದು ಸಾಬೀತುಪಡಿಸಲುನಿಗದಿತ ಅವಧಿಯ ಸೂಪರ್ ಸೇಲ್ ಯೋಜನೆಯೊಂದನ್ನು ಜಾರಿಗೊಳಿಸಿದೆ. ದೇಶೀಯ ಪ್ರಯಾಣಕ್ಕೆ ಎಲ್ಲಾ ವೆಚ್ಚಗಳೂ ಸೇರಿ ಕನಿಷ್ಠ ರೂ 1,499 ದರದ ಟಿಕೆಟ್ ಗಳನ್ನು ಅದು ಈ ಯೋಜನೆಯಂಗವಾಗಿ ಪ್ರಯಾಣಿಕರಿಗೆ ಒದಗಿಸುತ್ತಿದೆ.
ಇಂದಿನಿಂದ ಮೇ 25 ರ ತನಕ ಜುಲೈ ಹಾಗೂ ಸೆಪ್ಟಂಬರ್ 30ರ ತನಕದ ಪ್ರಯಾಣಕ್ಕಾಗಿ ಈ ಯೋಜನೆಯಂಗವಾಗಿ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ.
ಕಳೆದ ವಾರ ಸ್ಪೈಸ್ ಜೆಟ್, ಇಂಡಿಗೋ ಹಾಗೂ ಏರ್ ಏಷ್ಯ ಇಂಡಿಯಾ ಕೂಡ ಕಡಿಮೆ ವೆಚ್ಚದ ಟಿಕೆಟ್ ಗಳನ್ನು ಪ್ರಯಾಣಿಕರಿಗೆಒದಗಿಸುವುದಾಗಿ ಘೋಷಿಸಿದ್ದವು.
ಸ್ಪೈಸ್ ಜೆಟ್ ಒನ್-ವೇ ವಿಮಾನ ದರ ರೂ 511 ರಿಂದ ಆರಂಭವಾದರೆ, ಇಂಡಿಗೋ ಪ್ರಾರಂಭಿಕ ದರ ರೂ 800 ಆಗಿದೆ.ಏರ್ ಏಷ್ಯ ಇಂಡಿಯಾ ಹಲವುಕಡೆಗಳಿಗೆ ತನ್ನ ಪ್ರಯಾಣ ದರಗಳನ್ನು ಅರ್ಧದಷ್ಟು ಕಡಿತಗೊಳಿಸಿದೆ.