ಮಾಣಿ: ಮನೆಗೆ ನುಗ್ಗಿ ನಗ ನಗದು ಕಳವು

Update: 2016-05-21 12:40 GMT

ಬಂಟ್ವಾಳ, ಮೇ 21: ಮಾಣಿ ಸಮೀಪದ ಮನೆಯೊಂದರ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಹೊಟೇಲ್‌ವೊಂದರಲ್ಲಿ ಕೆಲಸ ಮಾಡುವ ಮಾಣಿ ಗ್ರಾಮದ ಕಾಫಿಕಾಡು ನಿವಾಸಿ ಯಾಕೂಬ್ ಎಂಬವರು ಪ್ರತಿನಿತ್ಯ ರಾತ್ರಿ 2 ಗಂಟೆಗೆ ಮನೆಯಿಂದ ತೆರಳಿ ಬೆಳಗ್ಗೆ 6 ಗಂಟೆಗೆ ಮನೆಗೆ ಹಿಂತಿರುಗುತ್ತಿದ್ದರು. ಎಂದಿನಂತೆ ಗುರುವಾರ ರಾತ್ರಿಯೂ ಅವರು ಕೆಲಸಕ್ಕೆ ತೆರಳಿದ್ದು, ಬೆಳಗ್ಗೆ ವಾಪಸ್ ಬಂದಾಗ ಮನೆಯ ಹಿಂಬದಿಯ ಕಿಟಕಿಯನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟನಲ್ಲಿದ್ದ 25 ಸಾವಿರ ರೂ. ನಗದು ಹಾಗೂ ಡ್ರವರ್‌ನಲ್ಲಿದ್ದ ಕಾಲು ಚೈನ್, ಕಿವಿ ಬೆಂಡೋಳೆ, ಎರಡು ಉಂಗುರ, ಬ್ರಾಸ್‌ಲೈಟ್ ಸೇರಿದಂತೆ ಒಟ್ಟು 1.20 ಲಕ್ಷ ರೂ. ವೆಚ್ಚದ 5 ಪವನ್ ಚಿನ್ನಾರಣಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.

ಒಟ್ಟು 4.45 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಕಳ್ಳರು ಕಳವುಗೈದಿದ್ದಾರೆ ಎಂದು ಯಾಕೂಬ್ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಎಸ್ಸೈ ಪ್ರಕಾಶ್ ದೇವಾಡಿಗ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News