ವಿ.ಎಸ್. ಅಚ್ಯುತಾನಂದನ್‌ರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು: ಸೀತಾರಾಂ ಯೆಚೂರಿ
Update: 2016-05-21 19:48 IST
ಹೊಸದಿಲ್ಲಿ,ಮೇ 21; ವಿ. ಎಸ್. ಅಚ್ಯುತಾಂದನ್‌ರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುವುದು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಹೊಸ ಸಚಿವ ಸಂಪುಟ ಸಭೆ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಮಾಧ್ಯಮಗಳೊಂದಿಗೆ ಹೇಳಿದ್ದಾರೆ.
ಭಾರೀ ಸೆಕೆಯನ್ನು ನಿರ್ಲಕ್ಷಿಸಿ ವಿಎಸ್ ಅಚ್ಯುತಾನಂದನ್ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಸರಕಾರದ ಸಲಹೆಗಾರನಾಗಿ ವಿ.ಎಸ್‌ರನ್ನು ನೇಮಿಸಲು ಪಕ್ಷದ ನಾಯಕತ್ವ ಆಲೋಚಿಸುತ್ತಿದೆ ಎಂದು ಸೂಚನೆ ದೊರಕಿದ್ದು ಮೇ 25ಕ್ಕೆ ನಡೆಯುವ ಪಕ್ಷದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗುವುದೆಂದು ವರದಿಯಾಗಿದೆ.