ವಿಟ್ಲ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಇಬ್ರಾಹೀಂ ಬಿ. ಬೆದ್ರಕಾಡು ಆಯ್ಕೆ
Update: 2016-05-21 20:52 IST
ಬಂಟ್ವಾಳ, ಮೇ 21: ವಿಟ್ಲ ರಿಕ್ಷಾ ಚಾಲಕ ಮಾಲಕರ ಸಂಘದ 2016-2017ನೆ ಸಾಲಿನ ಅಧ್ಯಕ್ಷರಾಗಿ ಇಬ್ರಾಹೀಂ ಬಿ. ಬೆದ್ರಕಾಡು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಜನಾರ್ದನ ಸೊರಂಗದ ಮೂಲೆ ಮತ್ತು ಗಿರೀಶ ಪೂರ್ಲಪ್ಪಾಡಿ, ಕಾರ್ಯದರ್ಶಿಯಾಗಿ ಸುರೇಶ್ ಕೊಟ್ಟಾರಿ ಕಡಂಬು, ಜೊತೆ ಕಾರ್ಯದರ್ಶಿಯಾಗಿ ಶೇಖರ ಹಾಗೂ ಕೋಶಾಧಿಕಾರಿಯಾಗಿ ಕೃಷ್ಣಪ್ಪ ನಾಯ್ಕ ಸೇರಾಜೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.