ಮೂಡುಬಿದಿರೆ: ವಾರದೊಳಗೆ ಹಳೆಯ ಕ್ವಾರಿ ಗುಂಡಿಗಳನ್ನು ಮುಚ್ಚಲು ತಹಶೀಲ್ದಾರ್ ಆದೇಶ

Update: 2016-05-21 15:38 GMT

ಮೂಡುಬಿದಿರೆ, ಮೇ 21: ಮೂಡುಬಿದಿರೆ ಹೋಬಳಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿ ಉಂಟಾದ ಕ್ವಾರಿ ಗುಂಡಿಗಳನ್ನು ಸಂಬಂಧಪಟ್ಟವರು ಏಳು ದಿನಗಳೊಳಗೆ ಮುಚ್ಚುವಂತೆ ಅಥವಾ ಶಾಶ್ವತ ತಡೆಬೇಲಿ ನಿರ್ಮಿಸುವಂತೆ ಮೂಡುಬಿದಿರೆ ತಹಶೀಲ್ದಾರ್ ಆದೇಶಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜತೆಗೆ ಎಲ್ಲಾ ನಷ್ಟಗಳಿಗೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಿ ಅವರಿಂದ ವಸೂಲಿಗೆ ಕ್ರಮ ಜರುಗಿಸಲಾಗುವುದೆಂದು ಮೂಡುಬಿದಿರೆ ತಹಶೀಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದಿರೆ ಹೋಬಳಿಯಲ್ಲಿ ಕೆಂಪುಕಲ್ಲು ಮತ್ತು ಕಪ್ಪುಕಲ್ಲು ಗಣಿಗಾರಿಕೆಗೆ ಕ್ವಾರಿ ತೆಗೆದು ನಂತರ ಗಣಿಗಾರಿಕೆ ಶರ್ತದ ಪ್ರಕಾರ ಕ್ವಾರಿ ಗುಂಡಿಗಳನ್ನು ಮುಚ್ಚದೆ ಇರುವುದರಿಂದ ಅಥವಾ ಜನ,ಜಾನುವಾರುಗಳು ಹೋಗದಂತೆ ತಡೆಬೇಲಿ ನಿರ್ಮಿಸದೆ ಇರುವುದರಿಂದ ಅಪಾಯದ ಅರಿವಿಲ್ಲದೆ ಈ ಹಿಂದಿನ ವರ್ಷಗಳಲ್ಲಿ ಪ್ರಾಣ ಹಾನಿಗಳಾಗಿರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮಳೆಗಾಲಕ್ಕೆ ಮುಂಚಿತವಾಗಿ ಈ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News