×
Ad

ಮೇ 22ರಂದು ಕೋಬೆ ಸಿಸ್ಲರ್ಸ್‌ ರೆಸ್ಟೋರೆಂಟ್ ಶುಭಾರಂಭ

Update: 2016-05-21 21:51 IST

ಮಂಗಳೂರು, ಮೇ 21: ನಗರದ ಬಲ್ಮಠದ ಕಲೆಕ್ಟರ್ಸ್‌ ಗೇಟ್ ಸರ್ಕಲ್‌ನಲ್ಲಿರುವ ಪರಿನ್ ಟವರ್‌ನ ನೆಲ ಅಂತಸ್ತಿನಲ್ಲಿ ಕೋಬೆ ಸಿಸ್ಲರ್ಸ್‌ ಶುಭಾರಂಭಗೊಳ್ಳಲಿದೆ. ಸಂಜೆ 4:30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹಾಗೂ ಡಾ. ನಿಲನ್ ಶೆಟ್ಟಿ ಭಾಗವಹಿಸುವರು.

ಈ ರೆಸ್ಟೋರೆಂಟ್‌ನಲ್ಲಿ ಇಂದಿನ ಪೀಳಿಗೆಗೆ ಅತ್ಯಂತ ಪ್ರಿಯವೆನಿಸುವ ವೈವಿಧ್ಯಮಯ, ಬಾಯಿಯಲ್ಲಿ ನೀರೂರಿಸುವ ಸಿಸ್ಲರ್‌ಗಳು, ಸ್ಟೀಕ್ಸ್, ಸ್ಯಾಂಡ್‌ವಿಚಸ್, ಬರ್ಗರ್ಸ್‌, ಪಿಜಾ, ಪಾಸ್ತಾ, ಸೀ ಫುಡ್ ಡಿಲಾಟ್ಸ್, ಮೋಕ್‌ಟೇಲ್ ಇತ್ಯಾದಿಗಳು ಕುಟುಂಬದ ಎಲ್ಲಾ ಸದಸ್ಯರಿಗೂ ಇಷ್ಟವಾಗುವಂತೆ ಲಭ್ಯವಿರುತ್ತದೆ.

ಭಾರತಾದ್ಯಂತ ಅನೇಕ ಶಾಖೆಗಳನ್ನು ಹೊಂದಿರುವಂತಹ ಕೋಬೆ ಸಿಸ್ಲರ್ಸ್‌ ದುಬೈ, ಮಸ್ಕತ್, ನ್ಯೂಜಿಲ್ಯಾಂಡ್, ಲಂಡನ್, ಕೆನಡಾ, ಮಲೇಶೀಯಾ ಮತ್ತು ಸೌತ್ ಆಫ್ರಿಕಾದಲ್ಲೂ ತನ್ನ ಪ್ರಾಂಚೈಸಿಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News