×
Ad

ವಿದ್ಯಾರ್ಥಿಯ ಅಪಹರಣ: ದೂರು

Update: 2016-05-21 22:42 IST

ಉಡುಪಿ, ಮೇ 21: ಮಂಗಳೂರಿನ ಕೆನರಾ ಕಾಲೇಜಿನ ಪಿಯುಸಿ ವಿದ್ಯಾರ್ಥಿ, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಶರಳಗಿ ಗ್ರಾಮದ ರವಿ ತಿಮ್ಮ ನಾಯ್ಕ ಎಂಬವರ ಮಗ ಸುಮಂತ್(17) ಎಂಬಾತ ದುಷ್ಕರ್ಮಿಗಳು ಅಪಹರಿಸಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ17ರಂದು ಇಂದ್ರಾಳಿಯಲ್ಲಿರುವ ದೇವೇಂದ್ರ ಎಂಬವರ ಮನೆಗೆ ಬಂದಿದ್ದ ಸುಮಂತ್ ಮೇ 18ರಂದು ಬೆಳಗ್ಗೆ ಮಂಗಳೂರಿನಲ್ಲಿರುವ ಕೆನರಾ ಕಾಲೇಜಿನಿಂದ ಮಾಕ್ಸ್ ಕಾರ್ಡ್ ತರುವುದಾಗಿ ಹೇಳಿ ಹೋದವನು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ.

ಈತನನ್ನು ಯಾರೋ ಅಪಹರಿಸಿರಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News